ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು 2001-02ರ ಸಾಲಿನಲ್ಲಿ ಗಳಿಸಿದ ಆದಾಯದ ಬಗ್ಗೆ ಮರು ಮೌಲ್ಯಮಾಪನ ನಡೆಸುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಆದಾಯ ತೆರಿಗೆ ಇಲಾಖೆಗೆ ಅನುಮತಿ ನೀಡುವ ಮೂಲಕ ಮಾಯಾ ಮತ್ತೊಂದು ಹಿನ್ನೆಡೆ ಅನುಭವಿಸುವಂತಾಗಿದೆ.
ಪೂರ್ವಸೂಚನೆ ನೀಡದೆ ತಮ್ಮ ಆಸ್ತಿ ಮರು ಪರಿಶೀಲನೆ ನಡೆಸಲು ಆದಾಯ ತೆರಿಗೆ ಇಲಾಖೆಗೆ ಅನುಮತಿ ನೀಡಬಾರದು ಎಂದು ಕೋರಿ ಬಿಎಸ್ಪಿ ವರಿಷ್ಠೆ ಮಾಯಾವತಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ವಿಕ್ರಂಜಿತ್ ಸೆನ್ ನೇತೃತ್ವದ ನ್ಯಾಯಪೀಠ ತಳ್ಳಿ ಹಾಕಿದೆ.
ಮಾಯಾವತಿ ಅವರು ತಮ್ಮ ವಿಶ್ವಾಸಾರ್ಹತೆ ಸಾಬೀತು ಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. 2001-02ರ ಸಾಲಿನ ತಮ್ಮ ಆದಾಯ ಗಳಿಕೆ ಕುರಿತು ಮರು ಪರಿಶೀಲನೆ ನಡೆಸುವ ಐಟಿ ಇಲಾಖೆ ನಿರ್ಧಾರವನ್ನು ಪಶ್ನಿಸಿ ಮಾಯಾ ಹೈಕೋರ್ಟ್ ಮೆಟ್ಟಿಲೇರಿದ್ದರು. |