ನವದೆಹಲಿ: ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕದಲ್ಲಿ "ನೈತಿಕತೆಯ ಪೊಲೀಸ'ರಂತೆ ವರ್ತಿಸುತ್ತಿರುವ ಶ್ರೀರಾಮಸೇನೆಯನ್ನು ನಿಷೇಧಿಸಬೇಕೆಂದು ಶುಕ್ರವಾರ ರಾಜ್ಯಸಭೆಯಲ್ಲಿ ಗಂಭೀರವಾಗಿ ಆಗ್ರಹಿಸಲಾಯಿತು.
ಇಂದು ಶೂನ್ಯ ವೇಳೆಯಲ್ಲಿ ಸಿಪಿಐ(ಎಂ)ನ ಬೃಂದಾ ಕಾರಟ್ ಧ್ವನಿ ಎತ್ತುವ ಮೂಲಕ ಮಾತನಾಡಿದ ಅವರು, ಪ್ರೇಮಿಗಳ ದಿನಾಚರಣೆಯಂದು ಸೆರೆಸಿಕ್ಕುವ ಜೋಡಿಗಳಿಗೆ ಮದುವೆ ಮಾಡಿಸುವುದಾಗಿ ಶ್ರೀರಾಮಸೇನೆ ಬೆದರಿಕೆ ಹಾಕಿರುವುದಾಗಿ ಹೇಳಿದರು.
ಅಲ್ಲದೇ ಮಂಜೇಶ್ವರ ಸಿಪಿಐಎಂ ಶಾಸಕ ಕುಂಞಂಬು ಅವರ ಪುತ್ರಿ ಶ್ರುತಿ ಅಪಹರಣ, ಮಂಗಳೂರಿನ ಕಿನ್ನಿಗೋಳಿಯಲ್ಲಿ ನೇಣಿಗೆ ಶರಣಾದ ಅಶ್ವಿನಿ ಪ್ರಕರಣವನ್ನೂ ಕೂಡ ಅವರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಹಿಂದೂತ್ವದ ಅಜೆಂಡಾದ ಮೂಲಕ ತಾಲಿಬಾನಿಕರಣ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆ ನಿಟ್ಟಿನಲ್ಲಿ ಪ್ರೇಮಿಗಳ ದಿನಾಚರಣೆಯಂದು ಯುವಕ-ಯುವತಿಯರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು. |