ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹಳಿ ತಪ್ಪಿದ ರೈಲು: 16 ಮಂದಿ ದಾರುಣ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಳಿ ತಪ್ಪಿದ ರೈಲು: 16 ಮಂದಿ ದಾರುಣ ಸಾವು
ಹೌರಾ-ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ಕನಿಷ್ಠ 16 ಮಂದಿ ಮೃತಪಟ್ಟಿದ್ದು 161 ಮಂದಿ ಗಾಯಗೊಂಡ ಘಟನೆ ಒರಿಸ್ಸಾದ ಜೈಪುರ ರೋಡ್ ಬಳಿ ಸಂಭವಿಸಿದೆ. ಗಾಯಗೊಂಡವರಲ್ಲಿ 40 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ರೈಲ್ವೇ ಮ‌ೂಲಗಳು ತಿಳಿಸಿವೆ.

ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಮಧ್ಯಂತರ ಬಜೆಟ್ ಘೋಷಣೆ ಮಾಡಿದ ದಿನವೇ ಈ ದುರ್ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಸುಮಾರು 7.50ರ ಸಮಯಕ್ಕೆ ಒರಿಸ್ಸಾದ ಜೈಪುರ ರೋಡ್ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ 14 ಬೋಗಿಗಳು ಹಳಿ ತಪ್ಪಿದ್ದು, ಘಟನೆ ನಡೆದ ಸ್ಥಳ ಭುವನೇಶ್ವರದಿಂದ ಸುಮಾರು 120 ಕಿ.ಮೀ. ದೂರದಲ್ಲಿದೆ.

ಹಳಿ ತಪ್ಪಿದ 14 ಬೋಗಿಗಳಲ್ಲಿ ಮ‌ೂರು ಬೋಗಿಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹೌರಾ ನಿಲ್ದಾಣದಿಂದ ಹೊರಟಿದ್ದ ರೈಲು ಶನಿವಾರ ಸಂಜೆ ಚೆನ್ನೈ ತಲುಪಬೇಕಿತ್ತು. ರೈಲು ಅತಿಯಾದ ವೇಗದಲ್ಲಿ ಸಂಚರಿಸುತ್ತಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ರೈಲಿನ ಚಾಲಕ ಮತ್ತು ಉಪ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೈಲಿನಲ್ಲಿ ಒಟ್ಟು 24 ಬೋಗಿಗಳಿದ್ದವು. ದುರ್ಘಟನೆ ನಡೆದ ಜಾಗದಲ್ಲಿ ಕತ್ತಲು ಆವರಿಸಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು.

ಮೃತಪಟ್ಟವರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಹಾಗೂ ರೈಲ್ವೇಯಲ್ಲಿ ಒಂದು ಉದ್ಯೋಗ ಘೋಷಿಸಲಾಗಿದೆ. ಗಂಭೀರ ಗಾಯಗೊಂಡವರಿಗೆ 50 ಸಾವಿರ ಹಾಗೂ ಚಿಕ್ಕಪುಟ್ಟ ಗಾಯಗಳಾದವರಿಗೆ 10 ಸಾವಿರ ಪರಿಹಾರ ಪ್ರಕಟಿಸಲಾಗಿದೆ.

ದುರ್ಘಟನೆ ಸಂಬಂಧ ರೈಲ್ವೇ ಇಲಾಖೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಘಟನೆಗೆ ಕಾರಣವೇನು ಎಂಬುದನ್ನು ಬಹಿರಂಗಪಡಿಸದ ಇಲಾಖೆ ತನಿಖೆಯ ನಂತರ ತಿಳಿಸಲಾಗುವುದು ಎಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿನ್ಹಾ ಮೇಲೆ ಹಲ್ಲೆ: ಬಿಜೆಪಿ ಸಭಾತ್ಯಾಗ
ರೈಲ್ವೆ ಬಜೆಟ್: ಹೊಸದಾಗಿ 43 ರೈಲು
ಮುಂಬೈ ದಾಳಿ ಸಂಚು ಪೂರ್ಣ ಬಹಿರಂಗಪಡಿಸಿ: ಪ್ರಣಬ್
ಮುಂಬೈ: ಪ್ರೇಮಿಗಳ ದಿನಾಚರಣೆಗೆ ಶಿವಸೇನೆ ವಿರೋಧ
ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ 'ಶ್ರೀರಾಮಸೇನೆ ನಿಷೇಧ'
ಮಾಯಾ ಆದಾಯ ಮರು ಪರಿಶೀಲನೆಗೆ ಹೈಕೋರ್ಟ್ ಅಸ್ತು