ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿಯ ಷಡ್ಯಂತ್ರವನ್ನು ಭಾಗಶಃ ಪಾಕಿಸ್ತಾನದಲ್ಲಿಯೇ ರೂಪಿಸಲಾಗಿತ್ತು ಎಂದು ತಪ್ಪೊಪ್ಪಿಕೊಂಡ ಬೆನ್ನಲ್ಲೇ, ಸಂಜೋತಾ ಎಕ್ಸ್‌ಪ್ರೆಸ್ ಬ್ಲಾಸ್ಟ್‌ನ ಹಿಂದೆಯೂ ಪಾಕ್ ವ್ಯಕ್ತಿಯ ಕೈವಾಡ ಇರುವುದಾಗಿ ಅಮೆರಿಕ ಹೇಳಿದೆ.
2007ರ ಫೆಬ್ರುವರಿಯಲ್ಲಿ ಸಂಭವಿಸಿದ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ 70ಮಂದಿ ಸಾವನ್ನಪ್ಪಿದ್ದರು. ಆ ನಿಟ್ಟಿನಲ್ಲಿ ಸಂಚಿನ ಹಿಂದಿರುವ ಪಾಕ್‌ನ ಅಸಿಫ್ ಕಸ್ಮಾನಿಯನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಬೇಕು ಎಂದು ಅಮೆರಿಕ ವಿಶ್ವಸಂಸ್ಥೆಗೆ ಕೋರಿಕೆ ಸಲ್ಲಿಸಿದೆ.
ಕಸ್ಮಾನಿ ಪಾಕಿಸ್ತಾನಿ ಪ್ರಜೆಯಾಗಿದ್ದು, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಭಾಗಿಯಾಗಿರುವ ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಬೇಕು ಎಂದು ಅಮೆರಿಕ ಆಗ್ರಹಿಸಿದೆ.
ಕಸ್ಮಾನಿ ಲಷ್ಕರ್ ಎ ತೊಯಿಬಾ ಹಾಗೂ ಅಲ್ ಕೈದಾ ಜೊತೆ ಸಂಪರ್ಕ ಹೊಂದಿದ್ದು, ಸಂಜೋತಾಎಕ್ಸ್‌ಪ್ರೆಸ್ ಸ್ಫೋಟದ ಹಿಂದೆ ಪಾಕ್ ಉಗ್ರರು ಶಾಮೀಲಾಗಿರುವುದಾಗಿ ಭಾರತ ಆರೋಪಿಸಿತ್ತು. ಆದರೆ ಬಳಿಕ ಪಾಕಿಸ್ತಾನ ಭಾರತದ ಈ ಆರೋಪವನ್ನು ನಿರಾಕರಿಸಿತ್ತು. |