ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಬಜರಂಗದಳ ಉಜೈನಿಯಲ್ಲಿ ಅವಾಂತರವನ್ನೇ ಸೃಷ್ಟಿಸಿದೆ, ಮನೆಗೆ ತೆರಳುತ್ತಿದ್ದ ಅಣ್ಣ-ತಂಗಿಯನ್ನೇ ಪ್ರೇಮಿಗಳೆಂದು ತಿಳಿದು ಅಟ್ಟಾಡಿಸಿಕೊಂಡು ಹೊಡೆದ ಘಟನೆ ಶನಿವಾರ ನಡೆದಿದೆ.
ವ್ಯಾಲೆಂಟೈನ್ಸ್ ಡೇಯಂದು ಕಾಣಸಿಗುವ ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡಿಸುವುದಾಗಿ ಶ್ರೀರಾಮಸೇನೆ ಕರ್ನಾಟಕದಲ್ಲಿ ಬೆದರಿಕೆ ಹಾಕಿತ್ತು. ಆದರೆ ಪ್ರೇಮಿಗಳ ದಿನಾಚರಣೆಗೆ ತಮ್ಮ ವಿರೋಧ ಇಲ್ಲ ಎಂದು ಬಜರಂಗದಳ ಶುಕ್ರವಾರ ಹೇಳಿಕೆ ನೀಡಿತ್ತು.
ಅದಕ್ಕೆ ತದ್ವಿರುದ್ದ ಎನ್ನುವಂತೆ ಕಾಲೇಜು ಕ್ಯಾಂಪಸ್‌ನಿಂದ ತೆರಳುತ್ತಿದ್ದ ಅಣ್ಣ-ತಂಗಿಯರನ್ನು ಅಡ್ಡಗಟ್ಟಿದ್ದ ಬಜರಂಗದಳ ಕಾರ್ಯಕರ್ತರು ಹಿಡಿದು ಥಳಿಸಿದ್ದರು. ನಾವು ಪ್ರೇಮಿಗಳಲ್ಲ, ಅಣ್ಣ-ತಂಗಿ ಎಂದು ಬೇಡಿಕೊಂಡರು ಕೂಡ ಕಿವುಡರಂತೆ ವರ್ತಿಸಿದ ಬಜರಂಗದಳದ ಕಾರ್ಯಕರ್ತರು ಇಬ್ಬರನ್ನು ಕ್ಯಾಂಪಸ್‌ನಲ್ಲಿ ಅಟ್ಟಾಡಿಸಿಕೊಂಡು ಹೊಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಘಟನೆಗೆ ಉತ್ತರಪ್ರದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. |