ಮುಂಬೈಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಸಾಕ್ಷ್ಯಾಧಾರಗಳಿಗೆ ಪಾಕಿಸ್ತಾನ ನೀಡಿರುವ ಉತ್ತರದಲ್ಲಿ ಮಹಾರಾಷ್ಟ್ರದ ಭಯೋತ್ಪಾದನೆ ನಿರೋಧಕ ಪಡೆ (ಎಟಿಎಸ್)ಯ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಹಾಗೂ ಅವರು ತನಿಖೆ ನಡೆಸುತ್ತಿದ್ದ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರ ಬಗ್ಗೆ ಪ್ರಸ್ತಾಪಿಸಲಾಗಿದೆ.
ಸುದ್ದಿ ಮೂಲಗಳ ಪ್ರಕಾರ ಕರ್ಕರೆ ಅವರ ಹತ್ಯೆಯ ಪ್ರತ್ಯಕ್ಷದರ್ಶಿಗಳು ಏನು ಹೇಳುತ್ತಾರೆ ಎಂಬುದರ ವಿವರಗಳನ್ನು ಪಾಕಿಸ್ತಾನ ಕೇಳಿದೆ. ಒಂದೆಡೆ ಪುರೋಹಿತ್ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ.
ಕಳೆದ ಗುರುವಾರ ಪಾಕಿಸ್ತಾನಕ್ಕೆ ಭಾರತಕ್ಕೆ ನೀಡಿರುವ ಮಾಹಿತಿಗಳಲ್ಲಿ ಇವೂ ಸೇರಿವೆ. ಅಲ್ಲದೇ ಮಾಲೆಗಾಂವ್ ಸ್ಫೋಟದ ಪ್ರಸ್ತಾಪವೂ ಇದೆ.
ಪುರೋಹಿತ್ ಮತ್ತು ಅವರ ಅಭಿನವಭಾರತ ಕಂಡ 2007ರ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದಲ್ಲಿ ಕೈವಾಡ ಹೊಂದಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ದಾಖಲೆಯಲ್ಲಿ ಪ್ರಶ್ನೆಗಳನ್ನು ಕೇಳಿದೆ. ಅದೇ ರೀತಿ ಡಿಎನ್‌ಎ, ಬೆರಳಚ್ಚು, ಫೋಟೋಗ್ರಾಫ್ಸ್ ಸೇರಿದಂತೆ 30ಪ್ರಶ್ನೆಗಳನ್ನು ಭಾರತಕ್ಕೆ ಕೇಳಿದೆ.
ಕರ್ಕರೆ ಸಾವಿನ ನಂತರ ಕ್ಯಾಬಿನೆಟ್ ಸಚಿವ ಎ.ಆರ್.ಅಂತುಳೆ ಅವರು, ಸಂದೇಶ ವ್ಯಕ್ತಪಡಿಸುವ ಮೂಲಕ ರಾಷ್ಟ್ರರಾಜ್ಯಕಾರಣದಲ್ಲಿ ತೀವ್ರ ವಿವಾದ ಹುಟ್ಟು ಹಾಕಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. |