ಒರಿಸ್ಸಾದಲ್ಲಿ ಶುಕ್ರವಾರ ಹೌರಾ-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಸತ್ತಿದ್ದು 16ಮಂದಿಯಲ್ಲ, ಕೇವಲ 9ಮಂದಿ, ಗಾಯಗೊಂಡವರು 45ಮಂದಿ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಆರ್.ವೇಲು ತಿಳಿಸಿದ್ದಾರೆ.
ರೈಲ್ವೆ ಬಜೆಟ್ ದಿನವೇ ನಡೆದ ಈ ದುರಂತದಲ್ಲಿ 16ಮಂದಿ ಮೃತಪಟ್ಟಿದ್ದು, 160 ಜನ ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ವರದಿಗಳು ಬಂದಿದ್ದವು. ಆದರೆ ಈಗ ಕೇವಲ 9ಶವಗಳು ಮಾತ್ರ ಸಿಕ್ಕಿವೆ.
ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ.
ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತದ ಬೆನ್ನಲ್ಲೇ, ಶನಿವಾರ ರೈಲ್ವೆ ಸಚಿವ ಲಾಲು ತವರು ಬಿಹಾರದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಗೋರಖ್‌ಪುರ-ಮುಜಾಫರ್‌ಪುರ ರೈಲು ಪೂರ್ವ ಚಂಪಾರಣ್ ಜಿಲ್ಲೆಯ ಸುಗೌಲಿ ರೈಲು ನಿಲ್ದಾಣದಲ್ಲಿ ಎಂಜಿನ್‌ಗೆ ಡಿಕ್ಕಿ ಹೊಡೆದಿದ್ದು, 16ಮಂದಿ ಗಾಯಗೊಂಡಿದ್ದರು. |