ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಧಾನಿ ಗ್ರಾಮದ ಮೇಲೆ ಶುಕ್ರವಾರ ಬೆಳಿಗ್ಗೆ ಭಾರತೀಯ ವಾಯುಪಡೆಯ (ಐಎಎಫ್) ವಿಮಾನ ಮನೆ ಹಾಗೂ ಬೆಳೆಗಳ ಮೇಲೆ ಪ್ರಯೋಗಾತ್ಮಕ ಬಾಂಬ್‌ಗಳನ್ನು ಹಾಕಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಆದರೆ ಗ್ರಾಮಸ್ಥರ ಈ ಆರೋಪವನ್ನು ಭಾರತೀಯ ವಾಯುಪಡೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ ವಾಯುಪಡೆ ಬಾಂಬ್‌ಗಳನ್ನು ಎಸೆದಿರುವುದಾಗಿ ಆರೋಪಿಸಿ ದೋಸೆ ಖಾನ್ ಕಿ ಧಾನಿಯ ನಿವಾಸಿ ದೊಸ್ತ್ ಅಲಿ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಗ್ರಾಮಗಳ ಮೇಲೆ ಹಾರಾಟ ನಡೆಸಿದ ಭಾರತೀಯ ವಾಯುಪಡೆಯ ವಿಮಾನ 11.30ರ ಸುಮಾರಿಗೆ ಬಾಂಬ್‌ಗಳ ಪ್ರಯೋಗ ನಡೆಸಿದ ಪರಿಣಾಮ ಬೆಳೆ ನಾಶವಾಗಿದ್ದಲ್ಲದೆ, ಮನೆಯು ಭಾಗಶಃ ಹಾನಿಗೊಂಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಬಾಂಬ್ ಪ್ರಯೋಗದ ಸಂದರ್ಭದಲ್ಲಿಯೇ ತಾನು 2ಕಿ.ಮೀ. ಅಂತರದಲ್ಲಿ ಇದ್ದಿರುವುದಾಗಿಯೂ ಅವರು ದೂರಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಐಎಎಫ್ ಬಾಂಬ್‌ಗಳ ಪ್ರಯೋಗ ನಡೆಸಿರುವುದು ಖಚಿತವಾಗಿದೆ ಎಂದು ಮೋಹನ್‌ಗಡ್ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಅಧಿಕಾರಿ ಸತ್ಯದೇವ್ ಆರ್‌ಹಾದಾ ಅವರು ಸ್ಪಷ್ಟಪಡಿಸಿದ್ದಾರೆ. |