ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಕುರಿತು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರು ಭಾನುವಾರ ನ್ಯಾಶನಲ್ ಕಾಂಗ್ರೆಸ್ ವರಿಷ್ಠ ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಶರದ್ ಪವಾರ್ ಅವರು ಪ್ರಧಾನಿಯಾಗುವುದಾದರೆ ಸಮಾಜವಾದಿ ಪಕ್ಷದಿಂದ ಯಾವುದೇ ಆಕ್ಷೇಪ ಇಲ್ಲ ಎಂದ ಅವರು, ಆದರೆ ಡಾ.ಮನಮೋಹನ್ ಸಿಂಗ್ ಮಾತ್ರ ನಮ್ಮ ಮುಖಂಡರು. ಎರಡನೇ ಬಾರಿಗೆ ಅವರೇ ಪ್ರಧಾನಿಯಾಗುವುದಿದ್ದರೂ ತಮ್ಮ ಅಭ್ಯಂತರ ಇಲ್ಲ ಎಂದರು. ಒಂದು ವೇಳೆ ಪವಾರ್ ಅಥವಾ ಮುಲಾಯಂಗೆ ಅವಕಾಶ ದೊರೆತದಲ್ಲಿ ಅದರಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಫುಲ್ ಪಟೇಲ್, ದೀಪ್ತಿ ತ್ರಿಪಾಠಿ ಮತ್ತು ತಾರಿಕ್ ಅನ್ವರ್ ಭಾಗವಹಿಸಿರುವುದಾಗಿ ಎನ್‌ಸಿಪಿ ಮೂಲಗಳು ತಿಳಿಸಿವೆ. |