ನರೇಂದ್ರ ಮೋದಿ ಸರ್ಕಾರ ಶ್ರೀಮಂತರ ಪರವಾದದ್ದು, ನಮ್ಮದು ಬಡವರ ಪರ ಸರ್ಕಾರ, ಈ ರಾಜ್ಯದಲ್ಲಿನ ಸರ್ಕಾರವನ್ನು ನೀವೇ ಉರುಳಿಸಬೇಕು. ನಿಮಗೆ ಅನುಕೂಲವಾಗುವ ಸರ್ಕಾರವನ್ನು ಚುನಾಯಿಸಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಜಾಗತೀಕರಣ ಮತ್ತು ಆರ್ಥಿಕ ಕುಸಿತದಿಂದ ಕೆಲಸ ಕಳೆದುಕೊಂಡಿರುವ 200ಮಂದಿಯನ್ನು ಕುರಿತು ಸೂರತ್ನ ಸರ್ದಾರ್ ಸ್ಮೃತಿ ಭವನ್ದಲ್ಲಿ ಅವರು ಮಾತನಾಡುತ್ತಿದ್ದರು.
ಗುಜರಾತ್ನಲ್ಲಿ ತಮ್ಮ ಮೂರು ದಿನಗಳ ಭೇಟಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್, ಟಾಟಾ ಅವರ ನ್ಯಾನೋ ಘಟಕಕ್ಕೆ ಏನೆಲ್ಲ ಸಹಾಯ, ಸವಲತ್ತುಗಳನ್ನು ಗುಜರಾತ್ ಸರ್ಕಾರ ನೀಡಿದೆ ಎಂಬುದನ್ನು ಜನರಿಗೆ ವಿವರಿಸಿದರು.
ವಜ್ರಗಳ ಉದ್ಯಮದಲ್ಲಿ ಈಗ ತಲೆದೋರಿರುವ ಬಿಕ್ಕಟ್ಟಿಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಈ ಬಿಕ್ಕಟ್ಟಿನ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಹೊರಬೇಕು ಎಂದು ಹೇಳಿದರು. |