ಆರ್ಥಿಕ ಹಿಂಜರಿತದ ವಿರುದ್ಧ ಸೆಣಸುವುದರ ಜೊತೆಗೆ ಮತದಾರರನ್ನು ಓಲೈಸುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಮಧ್ಯಂತರ ಬಜೆಟ್ ಮಂಡನೆಯಲ್ಲಿ, ಈ ದೇಶದ ರೈತರೇ ನಿಜವಾದ ಹೀರೋಗಳು ಆ ನಿಟ್ಟಿನಲ್ಲಿ ಕೃಷಿ ಸೇರಿದಂತೆ ಗ್ರಾಮೀಣಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಘೋಷಿಸಿದರು.ಇಂದು ಬೆಳಿಗ್ಗೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ, ಸದ್ಯ ಹಣಕಾಸು ಖಾತೆಯನ್ನೂ ಹೆಚ್ಚುವರಿಯಾಗಿ ಹೊಂದಿರುವ ವಿದೇಶಾಂಗ ವ್ಯವಹಾರ ಖಾತೆ ಸಚಿವ ಪ್ರಣವ್ ಮುಖರ್ಜಿ ಬಜೆಟ್ ಮಂಡಿಸಿದರು. ಆದರೆ ಆಮ್ ಆದ್ಮಿ ಬಜೆಟ್ ಮಂಡಿಸುವುದಾಗಿ ಹೇಳಿದ್ದ ಸರ್ಕಾರ ಭಾರೀ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಆದಾಯ ತೆರಿಗೆಗೆ ಸಂಬಂಧಿಸಿದ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಆದರೆ ಕೈಗಾರಿಕಾ ಕ್ಷೇತ್ರ ಟೀಕಾಪ್ರಹಾರ ಹರಿಸಿದೆ, ಇದೊಂದು ಚುನಾವಣಾ ಗಿಮಿಕ್‌ನ ಬಜೆಟ್ ಮಂಡನೆಯಾಗಿದೆ ಎಂದು ದೂರಿದೆ.ಸಂಸತ್‌ನಲ್ಲಿ ಆರನೇ ಹಾಗೂ ಅಂತಿಮ ಬಜೆಟ್ ಅನ್ನು ಪ್ರಣಬ್ ಮುಖರ್ಜಿ ಮಂಡಿಸುತ್ತಿದ್ದ ವೇಳೆಯಲ್ಲಿಯೇ ಕೇರಳದ ಸಂಸದ ವೀರೇಂದ್ರ ಕುಮಾರ್ ಅವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯನ್ನು 10ನಿಮಿಷಗಳ ಕಾಲ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಮುಂದೂಡಿದರು.ಬಜೆಟ್ ಮುಖ್ಯಾಂಶ:ರೈತರೇ ಈ ದೇಶದ ನಿಜವಾದ ಹೀರೋಗಳು37 ಮೂಲಭೂತ ಸೌಕರ್ಯ ಯೋಜನೆಗೆ ಗ್ರೀನ್ ಸಿಗ್ನಲ್ಇಂದಿರಾ ಆವಾಸ್ ಯೋಜನೆಯಡಿಯಲ್ಲಿ 60.12ಲಕ್ಷ ಮನೆ ನಿರ್ಮಾಣ37 ಮೂಲಭೂತ ಸೌಕರ್ಯ ಯೋಜನೆಗೆ 70ಕೋಟಿ ಬಿಡುಗಡೆರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮುಂದುವರಿಕೆಗೋಧಿ ಕ್ವಿಂಟಾಲ್‌ಗೆ 630ರಿಂದ 1080ರೂ.ಗೆ ಏರಿಕೆಕೃಷಿ ಕ್ಷೇತ್ರಾಭಿವೃದ್ದಿಗಾಗಿ 3ಹಂತಗಳಲ್ಲಿ 2,50,000ಕೋಟಿ ಬಿಡುಗಡೆಗ್ರಾಮೀಣಾಭಿವೃದ್ದಿಗೆ ಹೆಚ್ಚಿನ ಆದ್ಯತೆಮಧ್ಯಪ್ರದೇಶ-ರಾಜಸ್ಥಾನದಲ್ಲಿ ನೂತನ ಐಟಿಐಎಸ್ ಸ್ಥಾಪನೆಐಟಿಐಎಸ್ನಲ್ಲಿ ಯುವ ವಿಧವೆಯರ ಪ್ರವೇಶಾತಿಗೆ ಪ್ರಾಧಾನ್ಯತೆಹೆಚ್ಚಿನ ಮುಖ್ಯಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ |