ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ಯುಪಿಎ ಸರಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್‌ನಲ್ಲಿ ವೈಯಕ್ತಿಕ ಮತ್ತು ಕಾರ್ಪೊರೇಟ್ ತೆರಿಗೆಗಳಿಗೆ ಸರಕಾರ ಯಾವುದೇ ಮಾರ್ಪಾಡು ಮಾಡಿಲ್ಲ.40 ಸಾವಿರ ಕೋಟಿ ರೂ.ಗಳ ಪರಿಹಾರ ನಿಧಿಯನ್ನು ತೆರಿಗೆ ಕಡಿತದ ಮೂಲಕ ವಿಸ್ತರಿಸಲಾಗಿದೆ. ಕಳೆದ ಹಣಕಾಸು ವರ್ಷಕ್ಕಿಂತ 2008-09 ವರ್ಷದಲ್ಲಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ. ಆದರೆ, ಯಾವುದೇ ವಿಶೇಷವಾದ ಚುನಾವಣಾ ಆಕರ್ಷಕ ಸಂಗತಿಗಳು ಈ ಬಜೆಟ್‌ನಲ್ಲಿ ವ್ಯಕ್ತವಾಗಿಲ್ಲ. ಮತ್ತು ಬೆಲೆಗಳಲ್ಲಿಯೂ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಸಬ್ಸಿಡಿಗಳನ್ನು ಏರಿಸಲಾಗುತ್ತದೆ. ರಕ್ಷಣಾ ವಲಯಕ್ಕೆ 141703 ಕೋಟಿ ರೂ. ಮೀಸಲಿರಿಸಲಾಗಿದ್ದು, ಭಾರತ್ ನಿರ್ಮಾಣ್ ಯೋಜನೆಗೆ 4900 ಕೋಟಿ ರೂ., ಮಧ್ಯಾಹ್ನದೂಟ ಯೋಜನೆಗೆ 8300 ಕೋಟಿ ರೂ., ಸಂಪೂರ್ಣ ನೈರ್ಮಲ್ಯ ಯೋಜನೆಗೆ 1200 ಕೋಟಿ ರೂ. ಮತ್ತು ಮಕ್ಕಳ ಕಲ್ಯಾಣ ಯೋಜನೆಗಳಿಗೆ 6705 ಕೋಟಿ ರೂ. ನಿಗದಿಪಡಿಸಲಾಗಿದೆ.ಬಜೆಟ್ ಮಧ್ಯೆ, ಕೇರಳದ ಜೆಡಿಎಸ್ ಸಂಸದ ಎಂ.ಪಿ.ವೀರೇಂದ್ರ ಕುಮಾರ್ ಅವರು ತೀವ್ರ ಅಸ್ವಸ್ಥರಾದ ಕಾರಣ ಅಧಿವೇಶನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಯುವ ವಿಧವೆಯರಿಗೆ ಐಟಿಐ ಪ್ರವೇಶದಲ್ಲಿ ಆದ್ಯತೆ, ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ ಘೋಷಣೆ ಮಾಡಲಾಗಿದೆ.ಮತ್ತಷ್ಟು ಮುಖ್ಯಾಂಶಗಳಿಗೆ ಇಲ್ಲಿ ಕ್ಲಿಕ್ ಮಾಡಿ. |