ಯುಪಿಎ ಸರ್ಕಾರದ ಆರನೇ ಹಾಗೂ ಅಂತಿಮ ಬಜೆಟ್ ಅನ್ನು ಸೋಮವಾರ ಸಂಸತ್‌ನಲ್ಲಿ ಮಂಡಿಸುತ್ತಿದ್ದ ವೇಳೆ ಕೇರಳದ ಜೆಡಿಎಸ್ ಸಂಸದ ವೀರೇಂದ್ರ ಕುಮಾರ್ ಅವರು ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿದ್ದರಿಂದ ಲೋಕಸಭೆಯನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು.
ವೀರೇಂದ್ರ ಕುಮಾರ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ಕಲಾಪವನ್ನು 10ನಿಮಿಷಗಳ ಕಾಲ ಮುಂದೂಡಿದರು.
ಪ್ರಜ್ಞೆ ಕಳೆದುಕೊಂಡ ವೀರೇಂದ್ರ ಕುಮಾರ್ ಅವರನ್ನು ಸ್ಟ್ರೇಜರ್ ಮೂಲಕ ತಂದು ಅಂಬ್ಯುಲೆನ್ಸ್‌ನಲ್ಲಿ ಸಂಸತ್ ಆವರಣದಲ್ಲಿರುವ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಕೋಝಿಕೋಡ್‌ನ ಸಂಸದರಾಗಿರುವ ವೀರೇಂದ್ರಕುಮಾರ್ ಮಾತೃಭೂಮಿ ಪತ್ರಿಕೆಯ ಮಾಲೀಕರಾಗಿದ್ದಾರೆ. ಅಸ್ವಸ್ಥರಾಗಿರುವ ವೀರೇಂದ್ರ ಕುಮಾರ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಅಂಬುಮಣಿ ರಾಮದಾಸ್ ತಿಳಿಸಿದ್ದಾರೆ. |