ಮುಜಾಫರ್‌ನಗರ: ಇಲ್ಲಿನ ಹಳ್ಳಿಯೊಂದರಲ್ಲಿ ನಡೆದ ಮದುವೆ ಸಂದರ್ಭದಲ್ಲಿ ವಿಷಪೂರಿತ ಆಹಾರ ಸೇವಿಸಿ 70 ಮಂದಿ ಅಸ್ವಸ್ಥರಾದ ಘಟನೆ ವರದಿಯಾಗಿದೆ. ಸಿಹಿಯೂಟ ಮಾಡಿದ ನಂತರ ಹಲವರಿಗೆ ತಲೆನೋವು, ವಾಂತಿ ಬೇಧಿ ಶುರುವಾದ ನಂತರ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. |