ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಕುರಿತ ಹಳೇ ವಿಷಯವನ್ನೇ ದೊಡ್ಡದಾಗಿ ಪ್ರಶ್ನಿಸುತ್ತಿದೆ ಎಂದು ಭಾರತ ಸೋಮವಾರ ತಿಳಿಸಿದ್ದು, ಅನಾವಶ್ಯಕವಾಗಿ ಹಳೆ ವಿಷಯ ಕೆದಕುತ್ತಿದೆ ವಿನಃ ತಾನು ಕೊಟ್ಟ ಮಾತಿಗೆ ಖ್ಯಾತೆ ತೆಗೆಯುತ್ತಿದೆ ಎಂದು ಆರೋಪಿಸಿದೆ.
ಪಾಕಿಸ್ತಾನ ಮುಂಬೈ ದಾಳಿ ಕುರಿತಂತೆ ಮಾತನಾಡುವ ಬದಲು, ಅನಾವಶ್ಯಕವಾಗಿ ಹಳೆ ವಿಷಯ ಕೆದಕಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಮುಂಬೈ ಸ್ಫೋಟ ಕುರಿತಂತೆ ಭಾರತಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಸುಮಾರು 30ಪ್ರಶ್ನೆಗಳನ್ನು ಕೇಳಿದೆ ಅದರಲ್ಲಿ ಪುರೋಹಿತ್ ಮತ್ತು ಅವರ ಅಭಿನವಭಾರತ ಕಂಡ 2007ರ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದಲ್ಲಿ ಕೈವಾಡ ಹೊಂದಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದೆ. ಅದೇ ರೀತಿ ಡಿಎನ್‌ಎ, ಬೆರಳಚ್ಚು, ಫೋಟೋಗ್ರಾಫ್ಸ್ ಸೇರಿದಂತೆ 30ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಕೋರಿತ್ತು.
ಪಾಕಿಸ್ತಾನ ಕೇಳಿರುವ ಕೆಲವು ಪ್ರಶ್ನೆ ಹಳೆಯದು, ಕೆಲವು ಪ್ರಶ್ನೆ ಪೂರಕವಾಗಿವೆ ಹಾಗೆಯೇ ಕೆಲವು ಮಾಹಿತಿಗಳನ್ನು ಭಾರತದೊಂದಿಗೆ ಹಂಚಿಕೊಂಡಿದೆ. ಆ ನಿಟ್ಟಿನಲ್ಲಿ ನಾವು ಅವುಗಳನ್ನು ಪರಿಶೀಲನೆ ನಡೆಸಿ ಸರಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖರ್ಜಿ ತಿಳಿಸಿದರು. |