ದ್ವಿತೀಯ ಪಿಯುಸಿಯ 17ರ ಹರೆಯದ ವಿದ್ಯಾರ್ಥಿಯನ್ನು ಅಪಹರಿಸಿದ ಸಹಪಾಠಿಯೇ ಆತನನ್ನು ಕೊಲೆಗೈದ ಘಟನೆ ಇಲ್ಲಿನ ಬಾಂದ್ರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತ ಮುಕೀಮ್‌ನ ಶವವನ್ನು ಮಂಗಳವಾರ ಬೆಳಿಗ್ಗೆ ಪೊಲೀಸರು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.
ಮುಕೀಮ್ ಮುಂಬೈ ಬಾಂದ್ರಾದ ರಿಜ್ವಿ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿ. ಆತ ಫೆ.13ರಿಂದ ಕಾಣೆಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಹಪಾಠಿಯನ್ನು ಅಪಹರಿಸಿ, ಕೊಲೆಗೈದ ಆಪಾದನೆ ಮೇಲೆ 19ರ ಹರೆಯದ ಅಮಿರ್ ಸಿದ್ದಿಕಿ ಶೇಖ್ ಹಾಗೂ ಸರ್ಫರಾಜ್ ಎಂಬಿಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನಿಸಾರ್ ತಾಂಬೋಲಿ ಅವರು ಪಿಟಿಐಗೆ ತಿಳಿಸಿದ್ದಾರೆ.
ಶೇಕ್ ಹಾಗೂ ಸರ್ಫರಾಜ್ ಜೊತೆಗೂಡಿ ಮುಕೀಮ್‌ನನ್ನು ಅಪಹರಿಸಿ ಕೊಲೆಗೈದು, ಬಾಂದ್ರಾ ಸಮೀಪದ ಡ್ರೈನೇಜ್ ಒಳಗೆ ಎಸೆದಿದ್ದರು ಎಂದು ವಿವರಿಸಿದ್ದಾರೆ.
ಮುಕೀಮ್‌ನನ್ನು ಅಪಹರಿಸಿದ ಬಳಿಕ, ಎರಡು ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಮುಕೀಮ್ ಪೋಷಕರಲ್ಲಿ ಬೇಡಿಕೆ ಇಟ್ಟಿದ್ದರು. ಮುಕೀಮ್ ಅಪಹರಣದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾದ ನಂತರ, ಹೆದರಿಕ ಅಪಹರಣಕಾರರು ಆತನನ್ನು ಹತ್ಯೆಗೈದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. |