ಜಿಲ್ಲೆಯ ಏರುಮೇಲಿ ಎಂಬಲ್ಲಿ ಅಯ್ಯಪ್ಪ ಭಕ್ತರನ್ನು ಕೊಂಡೊಯ್ಯುತ್ತಿದ್ದ ಬಸ್ ಐವತ್ತು ಅಡಿ ಆಳದ ಕಣಿವೆಗೆ ಬಿದ್ದು 11 ಮಂದಿ ಸ್ಥಳದಲ್ಲೇ ಮೃತಪಟ್ಟು, 40 ಮಂದಿ ಗಾಯಗೊಂಡ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಗಾಯಗೊಂಡವರಲ್ಲಿ 20 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ 60 ಜನ ಪ್ರಯಾಣಿಸುತ್ತಿದ್ದ ಈ ಬಸ್ ಪಂಪಾ ಕಣಿವೆಯ ಬಳಿ 50 ಅಡಿ ಆಳದ ಕಣಿವೆಗೆ ಬಿದ್ದು ಈ ದುರ್ಘಟನೆ ಸ೦ಭವಿಸಿದೆ.ಗಾಯಗೊಂಡವರನ್ನು ಕೊಟ್ಟಾಯಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಹಾಗೂ ಕಾಂಜಿರಾಪಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. |