ಅಂತಿಮ ಹಂತದ ಚುನಾವಣೆ ನಡೆಯುವರೆಗೆ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸದಂತೆ ಚುನಾವಣಾ ಆಯೋಗ ಮಂಗಳವಾರ ಮಾಧ್ಯಮಗಳಿಗೆ ಕಟ್ಟುಪಾಡು ವಿಧಿಸಿದೆ.
ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸದಂತೆ ಚುನಾವಣಾ ಆಯೋಗ ಪ್ರಕಟಣೆ ನೀಡಿದ್ದು, ಇಲೆಕ್ಟ್ರಾನಿಕ್, ಮುದ್ರಣ ಹಾಗೂ ಎಲ್ಲಾ ವಿಧದ ಮಾಧ್ಯಮಗಳು ಎಲ್ಲಾ ಹಂತದ ಚುನಾವಣೆ ಮುಗಿದ ನಂತರವೇ ಸಮೀಕ್ಷಾ ವರದಿಯನ್ನು ಪ್ರಕಟಿಸಬೇಕೆಂದು ತಿಳಿಸಿದೆ.
ಚುನಾವಣೆ ಅಂತ್ಯಕ್ಕೆ ಮುನ್ನವೇ ಸಮೀಕ್ಷೆಯನ್ನು ಪ್ರಕಟಿಸುವುದಕ್ಕೆ ಕಟ್ಟುಪಾಡು ವಿಧಿಸಿರುವ ಚುನಾವಣಾ ಆಯೋಗ, ಮತದಾನ ಮುಗಿಯುವ 48ಗಂಟೆಗಳ ಮೊದಲು ಯಾವುದೇ ಕಾರಣಕ್ಕೂ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಬಾರದೆಂದು ಆಯೋಗ ಹೇಳಿದೆ.
ಮತಗಟ್ಟೆ ಸಮೀಪ ಸಮೀಕ್ಷೆ ಅಥವಾ ಜನಮತ ಗಣನೆ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ತನ್ನ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದಕ್ಕೆ ತಾನು ತಡೆಯಾಜ್ಞೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಕಳೆದ ತಿಂಗಳು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಆಯೋಗ ಈ ನಿರ್ಧಾರ ಪ್ರಕಟಿಸಿದೆ. |