ತಮ್ಮ ಆಡಳಿತಾವಧಿಯಲ್ಲಿ ಸಚಿವರ ಮತ್ತು ಶಾಸಕರ ದೂರವಾಣಿಗಳನ್ನು ಕದ್ದಾಲಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರ ಆದೇಶ ನೀಡಿದೆ.ವಸುಂಧರಾ ರಾಜೆ ಸರ್ಕಾರ ಆಕ್ರಮವಾಗಿ ಉನ್ನತ ಅಧಿಕಾರಿಗಳ, ರಾಜಕೀಯ ಮುಖಂಡರ ನೂರಕ್ಕೂ ಅಧಿಕ ದೂರವಾಣಿಗಳನ್ನು ಕದ್ದಾಲಿಸಿದ ಆರೋಪವನ್ನು ಎದುರಿಸುತ್ತಿರುವುದಾಗಿ ವರದಿ ತಿಳಿಸಿದೆ.ಅವೆಲ್ಲಕ್ಕಿಂತ ಅಚ್ಚರಿಗೀಡು ಮಾಡಿರುವ ಸಂಗತಿ ಎಂದರೆ, ವಸುಂಧರಾ ಅವರು, ತನ್ನದೇ ಸಂಪುಟದ ಸಚಿವರ ಹಾಗೂ ಶಾಸಕರ ದೂರವಾಣಿಗಳನ್ನು ಕದ್ದಾಲಿಸಿದ ಆರೋಪ ಹೊತ್ತಿದ್ದಾರೆ.ರಾಜೆ ಅವರು ಪೂರ್ವಾಗ್ರಹತನದಿಂದಾಗಿ ದೂರವಾಣಿ ಕದ್ದಾಲಿಸಿದ್ದರು ಎಂದು ಮಾಜಿ ಸಚಿವ ಕಿರೋರಿ ಲಾಲ್ ಮೀನಾ, ಬಿಜೆಪಿಯ ಮಾಜಿ ಶಾಸಕ ಸುರೇಂದರ್ ಸಿಂಗ್ ರಾಥೋಡ್, ಗುಜ್ಜಾರ್ ಮುಖಂಡ ಹಾಗೂ ಬಿಜೆಪಿ ಮಾಜಿ ಶಾಸಕ ಪ್ರಹ್ಲಾದ್ ಗುಂಜಾಲ್, ಅತ್ತಾರ್ ಸಿಂಗ್ ಭಾಧಾನಾ ಅವರು ಗಂಭೀರವಾಗಿ ಆರೋಪಿಸಿದ್ದಾರೆ.ಆಡಳಿತಾರೂಢರಾಗಿದ್ದ ರಾಜೇ ಸರ್ಕಾರ ಸಚಿವರ ಮತ್ತು ಶಾಸಕರ ದೂರವಾಣಿಗಳನ್ನು ದೂರವಾಣಿಗಳನ್ನು ಕದ್ದಾಲಿಸುವಂತೆ ಕೇಳಿಕೊಂಡಿತ್ತು ಎಂದು ಬಿಎಸ್‌ಎನ್‌ಎಲ್ ವಿಷಯವನ್ನು ಬಹಿರಂಗಪಡಿಸುವ ಮೂಲಕ ವಿವಾದಕ್ಕೆ ಸಿಲುಕುವಂತಾಗಿದೆ.ವಿಶೇಷ ವಿಧಿಯನ್ವಯ ಮಾತ್ರ ಅದೂ ರಾಜ್ಯ ಗೃಹ ಇಲಾಖೆಯ ಅಧಿಕೃತವಾಗಿ ಆದೇಶ ನೀಡಿದ್ದಲ್ಲಿ ದೂರವಾಣಿಗಳನ್ನು ಕದ್ದಾಲಿಸಲು ಭಾರತೀಯ ದೂರವಾಣಿ ಕಾಯ್ದೆಯನ್ವಯ ಅವಕಾಶ ಇದೆ. ಆದರೆ ರಾಜೇ ಕಾನೂನನ್ನು ಗಾಳಿಗೆ ತೂರುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. |