ಕಳೆದ ವರ್ಷ ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಇಂಡಿಯನ್ ಮುಜಾಹಿದೀನ್‌ನ ಶಂಕಿತ ಆರು ಮಂದಿ ಉಗ್ರರಿಗೆ ದೆಹಲಿ ಕೋರ್ಟ್ ಬುಧವಾರ ಮತ್ತೆ 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇಂದು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ನ್ಯಾಯಾಯಲಯದ ಮುಖ್ಯನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು, ಇಂಡಿಯನ್ ಮುಜಾಹಿದೀನ್‌ನ ಮೊಹಮ್ಮದ್ ಸೈಫ್, ಜೀಶಾನ್ ಅಹ್ಮದ್, ಸಾಕಿಬ್ ನಿಸ್ಸಾರ್, ಜಿಯಾ ಉರ್ ರೆಹಮಾನ್, ಮೊಹ್ಮದ್ ಶಕೀಲ್ ಹಾಗೂ ಮೊಹ್ಮದ್ ಹಕೀಮ್‌ಗೆ ಮಾರ್ಚ್‌ಗೆ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು.
ಕಳೆದ ವರ್ಷ ಡಿಸೆಂಬರ್ 13ರಂದು ದೆಹಲಿಯ ಕೊನ್ನಾಟ್ ಪ್ಲೇಸ್ ಮತ್ತು ತಿಲಕ್ ಮಾರ್ಗನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ ಆರೋಪದ ವಿರುದ್ಧ ಇಲ್ಲಿನ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಲ್ಲದೇ ಸೆಪ್ಟೆಂಬರ್ 13ರಂದು ಕರೋಲ್ ಬಾಗ್, ಕೊನ್ನಾಟ್ ಪ್ಲೇಸ್, ಗ್ರೇಟರ್ ಕೈಲಾಶ್ , ತಿಲಕ್ ಮಾರ್ಗ್‌ಗಳಲ್ಲಿ ಸಂಭವಿಸಿದ ಸ್ಫೋಟ ಹಾಗೂ ಜೀವಂತ ಬಾಂಬ್‌ಗಳನ್ನು ವಶಪಡಿಸಿಕೊಂಡ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿದೆ.
ಮೂರು ದೂರುಗಳ ತನಿಖೆಯನ್ನು ಪೂರ್ಣಗೊಳಿಸಿದ ಬಳಿಕ ಪೊಲೀಸರು ಈಗಾಗಲೇ ಶಂಕಿತ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. |