ದೇಶಭಕ್ತ ಸಂಘಟನೆ ಎನಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರಧಾನ ಕಾರ್ಯದರ್ಶಿ ಮೋಹನ್ ಭಾಗ್ವತ್ ಸೇರಿದಂತೆ ಇಬ್ಬರು ಮುಖಂಡರಿಗೆ ಪಾಕಿಸ್ತಾನದ ಐಎಸ್‌ಐ ಆರ್ಥಿಕ ನೆರವು ನೀಡಿರುವುದಾಗಿ ಆರ್‌ಎಸ್‌ಎಸ್‌ನ ಶ್ಯಾಮ್ ಅಪ್ಟೆ ತನ್ನ ಬಳಿ ಆರೋಪಿಸಿರುವುದಾಗಿ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ದಯಾನಂದ ಪಾಂಡೆ ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ.'2008 ರ ಆಗೋಸ್ಟ್ ತಿಂಗಳಿನಲ್ಲಿ ನಾನು ಆರ್‌ಎಸ್‌ಎಸ್ ಮುಖಂಡ ಶ್ಯಾಮ್ ಅಪ್ಟೆ ಅವರನ್ನು ಪುಣೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ,ಆರ್‌ಎಸ್‌ಎಸ್ ಮುಸ್ಲಿಂ ಘಟಕದ ಮುಖಂಡ ಇಂದ್ರೇಶ್ ಮತ್ತು ಭಾಗ್ವತ್ ಇಬ್ಬರೂ ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್‌ನಿಂದ ಹಣ ಪಡೆದಿರುವುದಾಗಿ' ತಿಳಿಸಿದ್ದರು ಎಂದು ಪಾಂಡೆ ವಿವರಿಸಿದ್ದಾರೆ. ದೇಶಭಕ್ತ ಸಂಘಟನೆ ಎಂದು ಹೇಳಿಕೊಳ್ಳುತ್ತಿರುವ ಆರ್‌ಎಸ್‌ಎಸ್ ಸಂಘಟನೆಯ ಮುಖಂಡರೇ ಅದು ಪಾಕಿಸ್ತಾನದಿಂದ ಆರ್ಥಿಕ ನೆರವು ಪಡೆದ ವಿಷಯ ಕೇಳಿದ ನಂತರ ಕೆರಳಿದ ಸ್ವಯಂಘೋಷಿತ ಸ್ವಾಮೀಜಿ, ಅವರಿಬ್ಬರನ್ನೂ (ಇಂದ್ರೇಶ್-ಭಾಗ್ವತ್) ಮುಗಿಸಿಬಿಡುವಂತೆ ಮತ್ತೊಬ್ಬ ಕ್ಯಾಪ್ಟನ್ ಜೋಶಿ ಹತ್ತಿರ ಕೋರಿಕೊಂಡಿರುವುದಾಗಿಯೂ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.ಆ ಬಳಿಕ ದಯಾನಂದ ಪಾಂಡೆ ಅಭಿನವ್ ಭಾರತ್ ಎಂಬ ಮತ್ತೊಂದು ಹಿಂದೂ ಸಂಘಟನೆಯನ್ನು ಹುಟ್ಟುಹಾಕಿದ್ದ, ಹಾಗೇ ಅಭಿನವ್ ಭಾರತ್ ಜನ್ಮ ತಳೆದ ನಂತರ ಇಂದ್ರೇಶ್ ಮತ್ತು ಭಾಗ್ವತ್ ಕೊಲೆಗೈಯುವಂತೆ ಕ್ಯಾಪ್ಟನ್ ಜೋಶಿಗೆ ನಿರ್ದೇಶನ ನೀಡಲಾಗಿತ್ತು ಎಂದು ಪಾಂಡೆ ತಪ್ಪೊಪ್ಪಿಕೊಂಡಿದ್ದಾನೆ.ಆದರೆ ಪಾಂಡೆಯ ಹತ್ಯೆ ಆದೇಶ ಶ್ಯಾಮ್ ಅಪ್ಟೆಯನ್ನು ಕೆರಳಿಸಿದ್ದರಿಂದ ತಾನು ಅವರಿಬ್ಬರನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಜೋಶಿ ಕೈಚೆಲ್ಲಿರುವುದಾಗಿಯೂ ತಪ್ಪೊಪ್ಪಿಗೆ ವರದಿಯಲ್ಲಿ ವಿವರಿಸಲಾಗಿದೆ.ಇಡೀ ಮಾಲೇಗಾಂವ್ ಸ್ಫೋಟದ ಪ್ರಮುಖ ರೂವಾರಿಗಳೇ ಪುರೋಹಿತ್ ಹಾಗೂ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಆಗಿದ್ದಾರೆ ಎಂಬುದಾಗಿ ಪಾಂಡೆ ಬಹಿರಂಗಪಡಿಸಿದ್ದು, ದೇಶಾದ್ಯಂತ ಮುಸ್ಲಿಮರು ಹಿಂದೂಗಳ ಮಾರಣಹೋಮ ನಡೆಸಿದ್ದಕ್ಕೆ ಪ್ರತೀಕಾರ ತೀರಿಸಲು ಈ ಸಂಚು ರೂಪಿಸಿರುವುದಾಗಿ ಹೇಳಿದ್ದಾನೆ. |