ಡಿಎಂಕೆ ಪಕ್ಷ ಮುಳುಗುತ್ತಿರುವ ಹಡಗು ಎಂದು ಭವಿಷ್ಯ ನುಡಿದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ, ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕಾಂಗ್ರೆಸ್‌ಗೆ ಬಹಿರಂಗ ಆಹ್ವಾನ ನೀಡಿದ್ದಾರೆ.ಕೇಂದ್ರದಲ್ಲಿ ಮರಳಿ ನೀವು ಅಧಿಕಾರದ ಗದ್ದುಗೆ ಏರಬೇಕಾದರೆ ಡಿಎಂಕೆ ಸಖ್ಯ ತೊರೆದು ಎಐಎಡಿಎಂಕೆ ಕೈ ಹಿಡಿಯಬೇಕು ಎಂದು ಜಯಲಲಿತಾ ಕಾಂಗ್ರೆಸ್‌ಗೆ ಸಲಹೆ ನೀಡಿದ್ದಾರೆ. ಈ ಮೊದಲು ಎಐಎಡಿಎಂಕೆ ಹಾಗೂ ಕಾಂಗ್ರೆಸ್ ಗೆಳೆಯರಾಗಿದ್ದು, ಆ ನೆಲೆಯಲ್ಲಿ ಇದೀಗ ಮತ್ತೆ ಮೈತ್ರಿಯನ್ನು ಮುಂದುವರಿಸಬೇಕು ಎಂದು ಕಾಂಗ್ರೆಸ್‌ಗೆ ಸಲಹೆ ನೀಡುತ್ತಿರುವುದಾಗಿ ಅವರು ಹೇಳಿದರು.ಎಐಎಡಿಎಂಕೆ ಗೆಲುವು ಸಾಧಿಸುವುದಿಲ್ಲ ಎಂದು ಮೈತ್ರಿ ಮಾಡಿಕೊಳ್ಳುವುದಿಲ್ಲವೋ ಅದು ಆ ಪಕ್ಷಕ್ಕೆ ನಷ್ಟ ಎಂದು ತಿಳಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದಲ್ಲಿದ್ದ ಜಯಲಲಿತಾ ಇತ್ತೀಚೆಗೆ ಬಿಜೆಪಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಬಳಿಕ ತೃತೀಯರಂಗದಿಂದಲೂ ಅವರನ್ನು ದೂರ ಇಡಲಾಗಿತ್ತು.ಬಳಿಕ ಎಡಪಕ್ಷದ ಮುಖಂಡರು ಇತ್ತೀಚೆಗೆ ಜಯಲಲಿತಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅಲ್ಲದೇ ಜಯಲಲಿತಾ ಅವರು ತೃತೀಯರಂಗದಲ್ಲೇ ಇದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ದೆಹಲಿಯಲ್ಲಿ ಮಾತನಾಡುತ್ತ ಖಚಿತಪಡಿಸಿದ್ದರು. ಇದೀಗ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಜಯಲಲಿತಾ ಕಾಂಗ್ರೆಸ್ ಜತೆ ಕೈಜೋಡಿಸಲು ಮುಕ್ತ ಆಹ್ವಾನ ನೀಡಿದ್ದಾರೆ. |