ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸುಳ್ಳುಕೇಸು: ಆಜಂಗಢದ ಮುಸ್ಲಿಮರ ರ‌್ಯಾಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುಳ್ಳುಕೇಸು: ಆಜಂಗಢದ ಮುಸ್ಲಿಮರ ರ‌್ಯಾಲಿ
ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಸಾವಿರಾರು ಮುಸ್ಲಿಮರು ಉಲೇಮಾ ಮಂಡಳಿ ಮುಂದಾಳುತ್ವದಲ್ಲಿ ಲಖ್ನೋ ಬೀದಿಗಳಲ್ಲಿ ಭಾರೀ ಪ್ರತಿಭಟನೆ ನಡೆಸಿದರು.

ಉಲೇಮಾ ಮಂಡಳಿಯ ಕರೆಯನ್ವಯ, ಹಲವಾರು ಉಗ್ರಗಾಮಿಗಳು ಸೆರೆಸಿಕ್ಕಿರುವ ಉತ್ತರಪ್ರದೇಶದ ಆಜಂಗಢದಿಂದ ವಿಶೇಷ ರೈಲುಗಳಲ್ಲಿ ಶುಕ್ರವಾರ ಬೆಳಿಗ್ಗೆ ಲಖ್ನೋಗೆ ಆಗಮಿಸಿದ ಮುಸ್ಲಿಮರು ಚಾರ್‌ಬಾಗ್ ರೈಲು ನಿಲ್ದಾಣದಲ್ಲಿ ಒಟ್ಟು ಸೇರಿ, ಭಾರೀ ಭದ್ರತೆ ನಡುವೆ ಪ್ರತಿಭಟನೆ ನಡೆಸಿದರು.

ತೀಲೀವಾಲಿ ಮಸೀದಿಯಲ್ಲಿ ಸಮಾವೇಶ ನಡೆಸಿದ ಬಳಿಕ ಉಲೇಮಾ ಮಂಡಳಿ ಸದಸ್ಯರು ಮುಖ್ಯಮಂತ್ರಿ ಮಾಯಾವತಿ ಹಾಗೂ ರಾಜ್ಯಪಾಲ ಟಿ.ವಿ.ರಾಜೇಶ್ವರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ನಮ್ಮ ಯುವಕರು, ವಿಶೇಷವಾಗಿ ಆಜಂಗಢಕ್ಕೆ ಸೇರಿದ ಯುವಜನರನ್ನು, ಭಯೋತ್ಪಾದನೆ ಚಟುವಟಿಕೆಗಳ ತಪ್ಪು ಆರೋಪ ಹೊರಿಸಿ ಹಿಂಸಿಸಲಾಗುತ್ತಿದೆ ಎಂದು ಉಲೇಮಾ ಮಂಡಳಿ ಸಂಚಾಲಕ ಮೌಲಾನಾ ಅಮೀರ್ ರಶದಿ ಮದನಿ ಅವರು ತಿಳಿಸಿದರು.

ಭಯೋತ್ಪಾದನೆಯ ಸುಳ್ಳು ಆರೋಪ ಹೊರಿಸಲ್ಪಟ್ಟು ಬಳಿಕ ನ್ಯಾಯಾಲಯದ ಮೂಲಕ ಬಿಡುಗಡೆಗೊಂಡವರಿಗೆ ಪರಿಹಾರ ನೀಡಬೇಕು. ಮುಖ್ಯಮಂತ್ರಿ ನಮ್ಮ ಬೇಡಿಕೆಗೆ ಒಪ್ಪಿದರೆ, ನಾವು ಅದಕ್ಕೆ ತಕ್ಕ 'ಪ್ರತಿಫಲ' ನೀಡುತ್ತೇವೆ ಎಂದು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಯೋಚಿಸಿರುವ ಮದನಿ ಹೇಳಿದರು.

ಕೆಲವು ತಿಂಗಳ ಹಿಂದೆ ಪೊಲೀಸರೊಂದಿಗಿನ ಚಕಮಕಿಯಲ್ಲಿ ಆಜಂಗಢದ ಮೂವರು ಉಗ್ರರು ಗುಂಡಿಗೆ ಬಲಿಯಾಗಿದ್ದ ನವದೆಹಲಿಯ ಬಾಟ್ಲಾ ಹೌಸ್ ಎನ್‌ಕೌಂಟರ್ ಬಗ್ಗೆ ಸಿಬಿಐ ಮತ್ತು ನ್ಯಾಯಾಂಗ ತನಿಖೆಯಾಗಬೇಕು ಎಂದು ಮಂಡಳಿ ಆಗ್ರಹಿಸುತ್ತಲೇ ಇತ್ತು. ಮೃತಪಟ್ಟವರು ಕಳೆದ ವರ್ಷದ ಸೆ.13ರಂದು ದೆಹಲಿಯ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದರೆಂಬುದು ಪೊಲೀಸರ ವಾದ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೇಮಂತ್ ಪೂಜಾರಿ ಸಹಚರ 'ಭುಜಂಗಣ್ಣ' ಹತ್ಯೆ
ಜಯಲಲಿತಾ ಆಹ್ವಾನ: 'ಸದ್ಯ' ಒಲ್ಲೆನೆಂದ ಕಾಂಗ್ರೆಸ್
ಅಕ್ರಮ ಆಸ್ತಿ: ಮಾಜಿ ಸಚಿವ ಸುಖ್‌ರಾಮ್ ದೋಷಿ
ಕಾಂಗ್ರೆಸ್: ಖರ್ಗೆ ಸಿಡಬ್ಲ್ಯುಸಿಗೆ, ಕರ್ನಾಟಕ ಹೊಣೆ ಆಜಾದ್‌ಗೆ
ಪಟ್ನಾ: ಐವರು ಕಾರ್ಮಿಕರ ಮೃತದೇಹ ಪತ್ತೆ
ಮಾರ್ಚ್ 1ಕ್ಕೆ ರಾಜಧಾನಿಗೆ 40ವರ್ಷ