ತಾಲಿಬಾನ್ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆಯು ಭದ್ರತೆಗೆ ಸಂಬಂಧಿಸಿದಂತೆ ಭಾರತದ ಆತಂಕವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ರಕ್ಷಣಾ ಮಂತ್ರಿ ಎ.ಕೆ. ಆಂಟನಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಮುಂಬೈ ದಾಳಿ ಬಳಿಕ ಸುರಕ್ಷಾ ವಿಷಯ ಸಂಬಂಧಿಸಿ ದೇಶ ಅಧಿಕ ಜಾಗರೂಕವಾಗಿದ್ದು, ಆದರೆ ಪಾಕ್ ಮತ್ತು ತಾಲಿಬಾನ್‌ನ ಈ ಹೊಸ ಬೆಳವಣಿಗೆಯು ನಮ್ಮನ್ನು ಚಿಂತೆಗೀಡು ಮಾಡಿದೆ ಎಂದು ಆಂಟನಿ ತಿಳಿಸಿದರು.
ಸ್ವಾಟ್ ಕಣಿವೆ ಪ್ರದೇಶದಲ್ಲಿ ಸಂಧಾನ ಮಾತುಕತೆಯ ಬಗ್ಗೆ ಪ್ರತಿಕ್ರಿಯಿಸಿದ ಆಂಟನಿ, ತಾಲಿಬಾನ್ ಉಗ್ರರ ಮುಂದೆ ಪಾಕ್ ಸೈನ್ಯವು ಸಂಪೂರ್ಣವಾಗಿ ತಲೆಬಾಗಿದೆ ಎಂದು ಆರೋಪಿಸಿದರು.
ಈ ಕುರಿತಂತೆ ಭಾರತ ಸರಕಾರದ ನಿಲುವನ್ನು ಕೇಂದ್ರ ಸಚಿವ ಪ್ರಣಬ್ ಮುಖರ್ಜಿ ಈ ಮೊದಲೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದರು.
|