ಎಲ್‌ಟಿಟಿಇ ವಿರೋಧಿ ನಿಲುವು ಹೊಂದಿರುವ ಜನತಾಪಕ್ಷದ ಸುಬ್ರಹ್ಮಣ್ಯಂ ಸ್ವಾಮಿ ಅವರನ್ನು ಬಂಧಿಸಬೇಕು ಎಂದು ಬಿಗಿಪಟ್ಟು ಹಿಡಿದಿರುವ ವಕೀಲರು ಶುಕ್ರವಾರ ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಮತ್ತೆ ಘರ್ಷಣೆಗೆ ಇಳಿದ ಪರಿಣಾಮ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸ್ ಜೀಪ್‌ಗೆ ಬೆಂಕಿ ಹಚ್ಚಲಾಗಿದೆ.
ಶುಕ್ರವಾರ ಮತ್ತೆ ಸುಬ್ರಹ್ಮಣ್ಯಂಸ್ವಾಮಿಯನ್ನು ಬಂಧಿಸಲೇಬೇಕೆಂದು ಪಟ್ಟುಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಸುಮಾರು 150ವಕೀಲರನ್ನು ಬಂಧಿಸಿದ ನಂತರ ಸ್ಫೋಟಗೊಂಡ ಹಿಂಸಾಚಾರದಿಂದಾಗಿ ಪೊಲೀಸ್ ವ್ಯಾನಿಗೆ ಬೆಂಕಿಹಚ್ಚಿದ ಘಟನೆ ನಡೆದಿದೆ.
ಸುಬ್ರಹ್ಮಣ್ಯಂಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಕೀಲರನ್ನು ಬಂಧಿಸಲು ಹೈಕೋರ್ಟ್ ಆವರಣಕ್ಕೆ ಆಗಮಿಸಿದ್ದ ಪೊಲೀಸರಿಗೂ ಮತ್ತು ವಕೀಲರ ನಡುವೆ ಘರ್ಷಣೆ ನಡೆಯುವ ಮೂಲಕ ಕೋರ್ಟ್ ಆವರಣ ರಣರಂಗವಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಸೇರಿದಂತೆ ಪೊಲೀಸರು, ಪತ್ರಕರ್ತರು, ವಕೀಲರು ಗಂಭೀರವಾಗಿ ಗಾಯಗೊಂಡಿದ್ದರು.
|