ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಕ್ ನಿರಾಕರಣೆಗಳೆಲ್ಲಾ ರೂಢಿಯಾಗಿಬಿಟ್ಟಿದೆ: ಭಾರತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ನಿರಾಕರಣೆಗಳೆಲ್ಲಾ ರೂಢಿಯಾಗಿಬಿಟ್ಟಿದೆ: ಭಾರತ
ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಬಿಡುಗಡೆಗೊಂಡಿದ್ದ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲಿಯೇ ಓಡಾಡುತ್ತಿದ್ದರೂ, 'ಅವನು ನಮ್ಮಲ್ಲಿಲ್ಲ' ಎಂಬ ಹೇಳಿಕೆ ನೀಡಿದ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿರುವ ಭಾರತ, 'ಪಾಕಿಸ್ತಾನದಿಂದ ಬರುತ್ತಿರುವ ಈ ತೆರನಾದ ನಿರಾಕರಣೆ ಹೇಳಿಕೆಗಳು ನಮಗೆ ರೂಢಿಯಾಗಿಬಿಟ್ಟಿವೆ' ಎಂದು ವ್ಯಂಗ್ಯವಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಮಸೂಜ್ ಅಜರ್ ಬಗ್ಗೆ ಭಾರತಕ್ಕೆ ಪಾಕಿಸ್ತಾನಿ ಮೂಲಗಳಿಂದ ವಿಭಿನ್ನವಾದ ಮಾಹಿತಿಗಳು ಹಲವಾರು ಬಾರಿ ದೊರೆತಿವೆ. 'ಅಜರ್ ಗೃಹ ಬಂಧನದಲ್ಲಿದ್ದಾನೆ ಎಂದು ಒಮ್ಮೆ ನಮಗೆ ಹೇಳಲಾಯಿತು. ಆ ಬಳಿಕ, ಅವನೆಲ್ಲೂ ಕಾಣಿಸುತ್ತಿಲ್ಲ ಎಂಬ ಹೇಳಿಕೆ ಬಂತು. ಕಣ್ಣಿಗೆ ಕಾಣದೇ ಇದ್ದವರನ್ನು ಗೃಹ ಬಂಧನದಲ್ಲಿಡುವುದಾದರೂ ಹೇಗೆ ಎಂಬುದು ನನಗೆ ತಿಳಿಯುತ್ತಿಲ್ಲ' ಎಂದು ಹೇಳಿದ್ದಾರೆ.

ಮುಂಬಯಿ ದಾಳಿ ನಡೆದ ಕೆಲವೇ ಸಮಯದಲ್ಲಿ ಪಾಕಿಸ್ತಾನಿ ರಕ್ಷಣಾ ಸಚಿವ ಚೌಧುರಿ ಅಹ್ಮದ್ ಮುಖ್ತಾರ್ ಅವರು ಭಾರತೀಯ ಸುದ್ದಿ ಚಾನೆಲ್ ಒಂದಕ್ಕೆ ಹೇಳಿಕೆ ನೀಡಿ, ಅಜರ್‌ನನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದಿದ್ದರು. ಆದರೆ ಕೆಲವೇ ದಿನಗಳ ಬಳಿಕ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ತದ್ವಿರುದ್ಧ ಹೇಳಿಕೆ ನೀಡಿ, ಅಜರ್ ಪಾಕಿಸ್ತಾನದಲ್ಲಿ ಇಲ್ಲ ಎಂದಿದ್ದರು. ಬುಧವಾರ ಪಾಕಿಸ್ತಾನಿ ಆಂತರಿಕ ಸಚಿವಾಲಯದ ಸಲಹೆಗಾರ ರಹಮಾನ್ ಮಲಿಕ್ ಕೂಡ ಅಜರ್ ಹಾಗೂ ಮತ್ತೊಬ್ಬ ಕುಖ್ಯಾತ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಲ್ಲ ಎಂದಿದ್ದರು.

ಪಾಕಿಸ್ತಾನಿ ಅಧಿಕಾರಿಗಳಿಂದ ಈ ರೀತಿಯ ನಿರಾಕರಣೆಯ ಹೇಳಿಕೆಗಳು ಬರುತ್ತಿರುವುದೇನೂ ವಿಶೇಷವಲ್ಲ ಎಂದು ಪ್ರಣಬ್ ಹೇಳಿದರು.

1999ರ ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಉಗ್ರಗಾಮಿಗಳು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರ್‌ಗೆ ಒಯ್ದಿದ್ದರು ಮತ್ತು ವಿಮಾನ ಮತ್ತದರ ಪ್ರಯಾಣಿಕರ ಸುರಕ್ಷಿತ ಬಿಡುಗಡೆಗೆ ಪ್ರತಿಯಾಗಿ ಮಸೂದ್ ಅಜರ್ ಮತ್ತು ಇಬ್ಬರು ಇತರ ಉಗ್ರಗಾಮಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ಅಜರ್, ಜೈಷ್ ಎ ಮೊಹಮ್ಮದ್ ಎಂಬ ರಕ್ತಪಿಪಾಸು ಸಂಘಟನೆಯನ್ನು ಹುಟ್ಟುಹಾಕಿದ್ದ. ನವೆಂಬರ್ 26ರ ದಾಳಿಯ ಕೆಲವೇ ದಿನಗಳ ಮೊದಲು ಆತ ಪಾಕಿಸ್ತಾನದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದನ್ನು ಟಿವಿ ಚಾನೆಲ್‌ಗಳು ತೋರಿಸಿದ್ದವು. ಆದರೆ ಜಾಗತಿಕ ಒತ್ತಡವು ಪಾಕಿಸ್ತಾನದ ಮೇಲೆ ಹೆಚ್ಚಿದ ಬಳಿಕ, ಆತ ಭೂಗತನಾಗಿದ್ದ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಮಿಳುನಾಡು: ಕಂಡಲ್ಲಿ ಗುಂಡಿಕ್ಕಲು ಆದೇಶ
'ನೈಸ್' ವಿಚಾರಣೆ-ಗೌಡರ ಕೋರಿಕೆಗೆ ಸುಪ್ರೀಂ ಅಸ್ತು
ಬಿಜೆಪಿ ಜತೆ ಮೈತ್ರಿ ಇಲ್ಲ: ಮುಲಾಯಂ
ಕಾಶ್ಮೀರ: ಲಘು ಭೂಕಂಪ
ಚೆನ್ನೈನಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
ಸ್ಸಾರಿ... ನೀವೆಲ್ಲಾ ಗೆದ್ದು ಬನ್ನಿ: ಸಂಸದರಿಗೆ ಚಟರ್ಜಿ