ಬಹುಮುಖಿ ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಸುಮಾರು 196 ಆಡು ಭಾಷೆಗಳು ವಿನಾಶದ ಅಂಚಿನಲ್ಲಿವೆ ಹಾಗೂ ಜಗತ್ತಿನಲ್ಲಿ ಅತಿ ಹೆಚ್ಚು ಭಾಷೆಗಳು ವಿನಾಶದ ಅಂಚಿನಲ್ಲಿರುವ ರಾಷ್ಟ್ರಗಳ ಪೈಕಿ ಭಾರತ ಪ್ರಥಮ ಸ್ಥಾನದಲ್ಲಿ ಎಂದು ಯುನೆಸ್ಕೋ ವರದಿ ತಿಳಿಸಿದೆ.
ನಂತರದ ಸ್ಥಾನದಲ್ಲಿ ಅಮೆರಿಕ (192) ಮತ್ತು ಇಂಡೋನೇಷ್ಯಾ(147) ಇವೆ. ಶನಿವಾರ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವಿನಾಶದ ಅಂಚಿನಲ್ಲಿರುವ ಭಾಷೆಗಳ ಪಟ್ಟಿಯನ್ನೂ ಯುನೆಸ್ಕೊ ಬಿಡುಗಡೆ ಮಾಡಿದೆ.
ಜಗತ್ತಿನಲ್ಲಿ ಸುಮಾರು 6ಸಾವಿರು ಭಾಷೆಗಳಿದ್ದು ಅವುಗಳಲ್ಲಿ 2,500 ಭಾಷೆಗಳು ಅವಸಾನದ ಅಂಚಿನಲ್ಲಿವೆ. ಸುಮಾರು 200 ಭಾಷೆಗಳನ್ನು ಕೇವಲ 10 ಮಂದಿ ಹಾಗೂ 178 ಭಾಷೆಗಳನ್ನು 10ರಿಂದ 50 ಮಂದಿ ಮಾತ್ರ ಬಳಸುತ್ತಾರೆ.
ಕಳೆದ ಮೂರು ಪೀಳಿಗೆಯ ಅಂತರದಲ್ಲಿ 200 ಭಾಷೆಗಳು ಸಂಪೂರ್ಣವಾಗಿ ನಾಶವಾಗಿವೆ. 538 ಭಾಷೆಗಳು ಸಂಪೂರ್ಣ ನಾಶದ ಅಂಚಿನಲ್ಲಿದ್ದರೆ. 632 ಭಾಷೆಗಳು ವಿನಾಶದ ಅಪಾಯದಲ್ಲಿದೆ. |