ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚಹ್ವಾಣ್ ನೇತೃತ್ವದ ಸರ್ವಪಕ್ಷ ನಿಯೋಗವು ಕರ್ನಾಟಕದ ಬೆಳಗಾವಿಗೆ ಕೇಂದ್ರಾಡಳಿತ ಸ್ಥಾನಮಾನ ನೀಡಬೇಕೆನ್ನುವ ಬೇಡಿಕೆಯನ್ನಿಟ್ಟಿದ್ದು, ಈ ಬೇಡಿಕೆಯನ್ನು ಕೇಂದ್ರ ಗೃಹ ಸಚಿವ ಪಿ. ಚಿಂದಬರಂ ನಿರಾಕರಿಸಿದ್ದಾರೆ. ಬೆಳಗಾವಿ ಕರ್ನಾಟಕದ ಭಾಗವಾಗಿದ್ದು, ವಿಧಾನಸಭೆ ಅಧಿವೇಶನ ಕೂಡ ನಡೆದಿದೆ. ಹೀಗಿರುವಾಗ ಅದಕ್ಕೆ ಕೇಂದ್ರಾಡಳಿತ ಸ್ಥಾನಮಾನ ನೀಡುವುದಾದರೂ ಹೇಗೆ? ಎಂದು ಚಿಂದಬರಂ ಪ್ರಶ್ನಿಸಿದರು. |