ನಗರದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಸ್ಫೋಟಿಸಲು ಬಾಂಬ್ ಇರಿಸಲಾಗಿದೆ ಎನ್ನುವ ದೂರವಾಣಿ ಕರೆಯ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಭಾರಿ ಬಿಗಿ ಭಧ್ರತೆ ಏರ್ಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಬಾಂದ್ರಾದಲ್ಲಿರುವ ಬೋರಿವೇಲಿ ರೈಲ್ವೆ ನಿಲ್ದಾಣ ಮತ್ತು ದಹಿಸಾರ್ ರೈಲ್ವೆ ನಿಲ್ದಾಣಗಳ ಸ್ಟೇಶನ್ ಮಾಸ್ಟರ್‌ಗಳಿಗೆ ಅನಾಮಿಕರು ದೂರವಾಣಿ ಕರೆ ಮಾಡಿ ಮುಂಬೈನಲ್ಲಿ ಮತ್ತೆ ಸ್ಫೋಟಗಳು ನಡೆಯಲಿವೆ ಸಿದ್ದರಾಗಿ ಎಂದು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾನಗರದ ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್ ನಿಷ್ಕ್ರೀಯ ತಂಡ ಕಾರ್ಯನಿರ್ವಹಿಸುತ್ತಿದ್ದು ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. |