ನ್ಯಾಯಾಧೀಶರ ನೇಮಕ ಮತ್ತು ಅವರ ವಿರುದ್ದ ದಾಖಲಾಗುವ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಈಗಿರುವ ಆಂತರಿಕ ತನಿಖಾ ಪ್ರಕ್ರಿಯೆ ಸಂಪೂರ್ಣವಾಗಿ ವಿಫಲವಾಗಿದ್ದು, ಹೊಸ ಪದ್ದತಿಯ ಅಗತ್ಯವಿದೆ ಎಂದು ಕೇಂದ್ರ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ತಿಳಿಸಿದ್ದಾರೆ.
ನ್ಯಾಯಾಧೀಶರ ನೇಮಕ ಮತ್ತು ಅವರ ಕುರಿತಂತೆ ನಡೆಸಬೇಕಾದ ತನಿಖೆಗೆ ಹೊಸ ಪ್ರಕ್ರಿಯೆ ಜಾರಿಗೆ ತರಬೇಕಾಗಿದೆ ಎಂದು ಅವರು ವಿಚಾರ ಸಂಕಿರಣದಲ್ಲಿ ಮಾತನಾಡುತ್ತ ಹೇಳಿದರು.
ಹೊಸ ತನಿಖಾ ಪದ್ದತಿ ಆಚರಣೆಗೆ ತರುವ ಬಗ್ಗೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಬಗ್ಗೆ ಸಂಸತ್ ಸಹ ಒಪ್ಪಿಗೆ ನೀಡಬೇಕು ಎಂದು ಅವರು ವಿವರಿಸಿದರು.
ಭ್ರಷ್ಟಾಚಾರದಲ್ಲಿ ತೊಡಗಿದ್ದ ನ್ಯಾಯಾಧೀಶರ ತನಿಖೆ ಮತ್ತು ನೂತನ ನ್ಯಾಯಾಧೀಶರ ನೇಮಕ ಕುರಿತಂತೆ ಇತ್ತೀಚೆಗೆ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಭಾರದ್ವಾಜ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
|