ಆರ್ಥಿಕ ಹಿಂಜರಿತವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರಕಾರ ಅಬಕಾರಿ ಹಾಗೂ ಸೇವಾ ತೆರಿಗೆಯಲ್ಲಿ ಶೇ.2ರಷ್ಟು ಕಡಿತಗೊಳಿಸಿದೆ.
ಅಲ್ಲದೇ ಸಾಮಾನ್ಯ ತೆರಿಗೆಯಲ್ಲಿ ಶೇ.10ರಿಂದ ಶೇ.8ಕ್ಕೆ ಇಳಿಸಲಾಗಿದೆ, ಸೇವಾ ತೆರಿಗೆಯನ್ನು ಶೇ.12ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಸಂಸತ್‌ನ ಮಧ್ಯಂತರ ಬಜೆಟ್ ಅಧಿವೇಶನದ ಚರ್ಚೆಯ ವೇಳೆಯಲ್ಲಿ ಮಾತನಾಡುತ್ತ ತಿಳಿಸಿದರು.
ಅಬಕಾರಿ ತೆರಿಗೆಯಲ್ಲಿ ಶೇ.4ರಷ್ಟು ಈ ಹಿಂದೆಯೇ ಕಡಿತಗೊಳಿಸಲಾಗಿದ್ದು ಆ ಪ್ಯಾಕೇಜ್ ಡಿಸೆಂಬರ್‌ನಿಂದ ಮಾರ್ಚ್ 31ರ ನಂತರವೂ ಮುಂದುವರಿಯಲಿದೆ ಎಂದು ಹೇಳಿದರು. ಸಗಟು ಸಿಮೆಂಟ್ ಖರೀದಿ ತೆರಿಗೆಯಲ್ಲಿ ಶೇ.10ರಿಂದ 8ಕ್ಕೆ ಇಳಿಸಲಾಗಿದೆ ಎಂದರು.
ಬಳಿಕ ಲೋಕಸಭೆ ಮಧ್ಯಂತರ ಬಜೆಟ್ ಅನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು, ಆದರೆ ವಿರೋಧ ಪಕ್ಷಗಳಾದ ಭಾರತೀಯ ಜನತಾ ಪಕ್ಷ ಮತ್ತು ಎಡಪಕ್ಷಗಳು ಇದನ್ನು ವಿರೋಧಿ ಸಭಾತ್ಯಾಗ ಮಾಡಿದವು. |