ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮದ್ರಾಸ್ ಘರ್ಷಣೆ: ನ್ಯಾಯಾಂಗ ತನಿಖೆಗೆ ಸುಪ್ರೀಂ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮದ್ರಾಸ್ ಘರ್ಷಣೆ: ನ್ಯಾಯಾಂಗ ತನಿಖೆಗೆ ಸುಪ್ರೀಂ ಆದೇಶ
ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ಸಂಭವಿಸಿದ ಹಿಂಸಾಚಾರ 'ಗಂಭೀರ' ಹಾಗೂ 'ಕೆಟ್ಟದ್ದು' ಎಂದು ಗುರುವಾರ ಸರ್ವೋಚ್ಚನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ಕು ಮಂದಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾಯಿಸುವಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಾಲಯದ ಆವರಣದೊಳಗೆ ಪ್ರವೇಶಿಸಿ ವಕೀಲರ ವಿರುದ್ಧ ಕ್ರಮಕೈಗೊಂಡಿರುವುದಕ್ಕೆ ಅವರು ಜವಾಬ್ದಾರಿಯಾಗಿರುವುದರಿಂದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸುವಂತೆ ನ್ಯಾಯಪೀಠ ಆದೇಶಿಸಿದೆ.

ಸರ್ವೋಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶರಾದ ಕೆ.ಜಿ.ಬಾಲಕೃಷ್ಣನ್ ಅವರು, ಮದ್ರಾಸ್ ಹೈಕೋರ್ಟ್ ಆವರಣದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ಸಂಭವಿಸಿದ ಘರ್ಷಣೆಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ.ಶ್ರೀಕೃಷ್ಣನ್ ಅವರ ನೇತೃದಲ್ಲಿ ನ್ಯಾಯಾಂಗ ತನಿಖೆ ನಡೆಸಲು ನೇಮಕ ಮಾಡಿ ತೀರ್ಪು ನೀಡಿದ್ದಾರೆ.

ಘಟನೆ ಕುರಿತು ಬಿ.ಶ್ರೀಕೃಷ್ಣನ್ ನೇತೃತ್ವದ ಸಮಿತಿ ಎರಡು ವಾರದೊಳಗೆ ಮಧ್ಯಂತರ ವರದಿಯನ್ನು ಸರ್ವೋಚ್ಚನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ವಕೀಲರು ಮುಷ್ಕರವನ್ನು ಹಿಂತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಲ್ಲದೆ, ಚೆನ್ನೈ ಪೊಲೀಸ್ ಕಮೀಷನರ್ ಹಾಗೂ ಮೂರು ಮಂದಿ ಸಹಾಯಕ ಜಂಟಿ ಆಯುಕ್ತರನ್ನು ವರ್ಗಾಯಿಸುವಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡಿದೆ.

ಮದ್ರಾಸ್ ಹೈಕೋರ್ಟ್ ಆವರಣದೊಳಗೆ ಪ್ರತಿಭಟನೆ ನಡೆಸುತ್ತಿದ್ದ ವಕೀಲರ ವಿರುದ್ಧ ಪೊಲೀಸರು ಒಳನುಗ್ಗಿ ಕ್ರಮ ಕೈಗೊಳ್ಳಲು ಅವರಿಗೆ ಅನುಮತಿ ನೀಡಿದವರು ಯಾರು ಎಂಬುದನ್ನು 24ಗಂಟೆಯೊಳಗೆ ಉತ್ತರ ನೀಡುವಂತೆ ಸರ್ವೋಚ್ಛನ್ಯಾಯಾಲಯ ತಮಿಳುನಾಡು ಸರಕಾರಕ್ಕೆ ಬುಧವಾರ ಸೂಚನೆ ನೀಡಿತ್ತು.

ಅಲ್ಲದೇ ಹೈಕೋರ್ಟ್ ಆವರಣದಲ್ಲಿರುವ ಪೊಲೀಸ್ ಠಾಣೆಯನ್ನು ಶೀಘ್ರವೇ ಸ್ಥಳಾಂತರಿಸುವಂತೆ ಅಪೆಕ್ಸ್ ಕೋರ್ಟ್ ಸರಕಾರಕ್ಕೆ ತಾಕೀತು ಮಾಡಿದ್ದು, ಅದಕ್ಕೆ ತಾನು ಬದ್ದವಾಗಿರುವುದಾಗಿ ಸರಕಾರ ಈ ಸಂದರ್ಭದಲ್ಲಿ ಭರವಸೆ ನೀಡಿತ್ತು.

ಮುಷ್ಕರ ನಿರತ ವಕೀಲರ ಕ್ರಮವನ್ನು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡ ಸರ್ವೋಚ್ಛನ್ಯಾಯಾಲಯ, ನ್ಯಾಯಾಲಯದ ಒಳಗಡೆಯೇ ಘೋಷಣೆಗಳನ್ನು ಕೂಗಿರುವ ವಕೀಲರ ನಡವಳಿಕೆ ಬಗ್ಗೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋಲ್ಕತಾ ಬೀದಿಯಲ್ಲಿ ಸುರಿದ ಹಣದ ಮಳೆ!
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಎನ್‌ಸಿ‌ಪಿ
ರೈಲು ಅಪಘಾತ: ಒಬ್ಬನ ಸಾವು
ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಚಟರ್ಜಿ
ಮೋದಿ ಕೆಳಗಿಳಿಸ್ಬೇಡಿ ಅಂತ ಆಡ್ವಾಣಿಗೆ ಹೇಳಿದ್ದೆ: ಠಾಕ್ರೆ
ಗ್ರ್ಯಾಚುಯಿಟಿ ಪಾವತಿ ವಿಧೇಯಕಕ್ಕೆ ತಿದ್ದುಪಡಿ