ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಕೇಂದ್ರ ಸಂಪುಟ ಗುರುವಾರ ಶೇ. 6ರಷ್ಟು ಹೆಚ್ಚಿಸಿದ್ದು, ಇದೀಗ ತುಟ್ಟಿ ಭತ್ಯೆ ಶೇ.16ರಿಂದ ಶೇ.22ಕ್ಕೇರಿದಂತಾಗಿದೆ.
ಈ ನಿರ್ಧಾರವನ್ನು ಘೋಷಿಸಿದ ಗೃಹಸಚಿವ ಪಿ. ಚಿದಂಬರಂ ಅವರು, ತುಟ್ಟಿ ಭತ್ಯೆ ಹೆಚ್ಚಳವು ಸರ್ಕಾರದ ಬೊಕ್ಕಸಕ್ಕೆ 6,000 ರೂಪಾಯಿ ಹೊರೆಯಾಗಲಿದೆ ಎಂದು ಹೇಳಿದ್ದಾರೆ. ಈ ಹೆಚ್ಚಳವು ಜನವರಿ ಒಂದರಿಂದ ಅನ್ವಯವಾಗುತ್ತಿದ್ದು, ಮಾರ್ಚ್ ಒಂದರಿಂದ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಇದು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರದ ಕೊನೆಯ ಕೊಡುಗೆಯಂತೆ ತೋರುತ್ತದೆ. ಈ ವಾರದ ಆದಿಯಲ್ಲಿ ಸರ್ಕಾರ ಅಬಕಾರಿ ಸುಂಕ ಹಾಗೂ ಸೇವಾ ತೆರಿಗೆಯನ್ನು ಶೇ.2ರಷ್ಟು ಇಳಿಸಿತ್ತು. ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕಂಪೆನಿಗಳ ಆಭಿವೃದ್ಧಿಯ ಹಿತದೃಷ್ಟಿಯಿಂದ ಸರ್ಕಾರ ಈ ಕಡಿತ ಮಾಡಿತ್ತು. |