ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 26/11: ಇಬ್ಬರು ಭಾರತೀಯರ ಪ್ರಧಾನ ಪಾತ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
26/11: ಇಬ್ಬರು ಭಾರತೀಯರ ಪ್ರಧಾನ ಪಾತ್ರ
ಫಾಹಿಮ್ ಅನ್ಸಾರಿ ಮತ್ತು ಸಬಾವುದ್ದೀನ್ ಎಂಬಿಬ್ಬರು ಭಾರತೀಯರು ಸಹಾಯ ನೀಡದೇ ಇರುತ್ತಿದ್ದರೆ, ಮುಂಬೈ ದಾಳಿ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಕರಣದ ಕುರಿತು ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಮುಂಬೈದಾಳಿಗೆ ಮುಂಚಿತವಾಗಿ ನಕಾಶೆಗಳು ಸೇರಿದಂತೆ ಮಾಹಿತಿಗಳನ್ನು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ತೋಯ್ಬಾದ ಕಾರ್ಯಕರ್ತರಿಗೆ ನೀಡಿರುವ ಆರೋಪದಲ್ಲಿ ಫಾಹಿಮ್ ಮತ್ತು ಸಬಾವುದ್ದೀನ್ ಎಂಬಿಬ್ಬರನ್ನು ಬಂಧಿಸಲಾಗಿದೆ.

2008ರ ಜನವರಿಯಲ್ಲಿ ಉತ್ತರ ಪ್ರದೇಶದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ಉಗ್ರಗಾಮಿ ದಾಳಿ ನಡೆಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿತ್ತು. ಬುಧವಾರ ಮುಂಬೈ ನ್ಯಾಯಾಲಯಕ್ಕೆ, ಮುಂಬೈ ಪೊಲೀಸರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 11,280 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಫಾಹಿಮ್ ದಾಳಿಯ ಉದ್ದೇಶಿತ ಸ್ಥಳಗಳ ಕುರಿತು ವಿಸ್ತೃತ ಶೋಧನೆ ನಡೆಸಿ ಮಾಹಿತಿಯನ್ನು ಸಬಾವುದ್ದೀನ್‌ಗೆ ನೀಡಿರುವುದಾಗಿ ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಸಬಾವುದ್ದೀನ್ ಭಾರತದಲ್ಲಿ ಲಷ್ಕರೆಯ ಪ್ರಮುಖ ಕಾರ್ಯಕರ್ತನಾಗಿದ್ದಾನೆ. ಈತ ಬಳಿಕ ಈ ಮಾಹಿತಿಗಳನ್ನು ಲಷ್ಕರೆಯ ಕಮಾಂಡರ್‌ಗಳಾದ ಜಾಕಿರ್ ಉರ್ ರೆಹ್ಮಾನ್ ಲಕ್ವಿ ಮತ್ತು ಅಬು ಕಾಫ ಇವರಿಗೆ ಕಳುಹಿಸಿದ್ದ. ಈ ಇಬ್ಬರೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಟೆಡ್ ಪಟ್ಟಿಯಲ್ಲಿದ್ದಾರೆ.

ಮುಂಬೈ ದಾಳಿಗಾಗಿ ಹತ್ತು ಉಗ್ರರಿಗೆ ತರಬೇತಿ ನೀಡಿದ ಕೊನೆಯ ಹಂತದ ವೇಳೆಗೆ ಕಾಫ ಈ ನಕಾಶೆಗಳನ್ನು ತೋರಿಸಿದ್ದ. ಈ ನಕಾಶೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನಿಸಿದಾಗ, ಈ ನಕಾಶೆಗಳನ್ನು ಫಾಹಿಮ್ ಮತ್ತು ಸಬಾವುದ್ದೀನ್ ತಯಾರಿಸಿದ್ದಾಗಿ ಆತ ತಿಳಿಸಿದ್ದನೆಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಮತ್ತು ಸಾವನ್ನಪ್ಪಿರುವ ಆತನ ಇತರ 9 ಸಹಚರರು ಈ ನಕಾಶೆಗಳ ಸಹಾಯದಿಂದ ನಿಖರವಾಗಿ ತಮ್ಮ ಗುರಿಗಳನ್ನು ಗೊತ್ತು ಮಾಡಿಕೊಂಡಿದ್ದರು. ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ ಆರೋಪಿಗಳಲ್ಲಿ ಕಸಬ್ ಫಾಹಿಮ್ ಮತ್ತು ಸಬಾವುದ್ದೀನ್ ಅವರುಗಳು ಬಂಧನದಲ್ಲಿದ್ದಾರೆ. ಇದರಲ್ಲಿ ಲಷ್ಕರೆ ಕಾರ್ಯಕರ್ತರ ಹೆಸರುಗಳು ಪ್ರಧಾನವಾಗಿದ್ದು, 35 ಪಾಕಿಸ್ತಾನಿಗಳನ್ನು ವಾಂಟೆಡ್ ಅಪರಾಧಿಗಳೆಂದು ತೋರಿಸಲಾಗಿದೆ.

ಮುಂಬೈ ದಾಳಿ ನಡೆಸಿರುವ ಹತ್ತು ಉಗ್ರರು, ತಮ್ಮು ಮೂರುದಿನಗಳ ಕಾಲದ ನರಮೇಧದ ವೇಳೆ ಚತ್ರಪತಿ ಶಿವಾಜಿ ಟರ್ಮಿನಸ್(ಸಿಎಸ್‌ಟಿ), ತಾಜ್ ಹಾಗೂ ಟ್ರೈಡೆಂಟ್ ಹೋಟೇಲ್, ನಾರಿಮನ್ ಹೌಸ್ ಮತ್ತು ಕೆಫೆ ಲಿಯೋಫೋಲ್ಡ್‌ಗಳ ಮೇಲೆ ಆಕ್ರಮಣ ನಡೆಸಿದ್ದರು. ದಾಳಿಯಲ್ಲಿ ವಿದೇಶಿಯರು, ಪೊಲೀಸರು ಸೇರಿದಂತೆ ಸುಮಾರು 183 ಮಂದಿ ಹತರಾಗಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್‌ಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಬೇಕು: ಮೋದಿ
ಸರ್ಕಾರಿ ನೌಕರರಿಗೆ ಶೇ.6 ತುಟ್ಟಿ ಭತ್ಯೆ ಹೆಚ್ಚಳ
ಮದ್ರಾಸ್ ಘರ್ಷಣೆ: ನ್ಯಾಯಾಂಗ ತನಿಖೆಗೆ ಸುಪ್ರೀಂ ಆದೇಶ
ಕೋಲ್ಕತಾ ಬೀದಿಯಲ್ಲಿ ಸುರಿದ ಹಣದ ಮಳೆ!
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಎನ್‌ಸಿ‌ಪಿ
ರೈಲು ಅಪಘಾತ: ಒಬ್ಬನ ಸಾವು