ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಸಂಸತ್ತಿನಲ್ಲಿ ಹಣಝಣಝಣ ಅತ್ಯಂತ ಕೆಟ್ಟ ಕ್ಷಣ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಸಂಸತ್ತಿನಲ್ಲಿ ಹಣಝಣಝಣ ಅತ್ಯಂತ ಕೆಟ್ಟ ಕ್ಷಣ'
PTI
ಲೋಕಸಭಾ ಸ್ಪೀಕರ್ ಆಗಿರುವ ಐದು ವರ್ಷಗಳ ಅವಧಿಯೊಂದು ಶ್ರೇಷ್ಠ ಅವಕಾಶ ಎಂದು ಬಣ್ಣಿಸಿರುವ ಸೋಮನಾಥ ಚಟರ್ಜಿ ಅವರು, 2008ರ ಜುಲೈ 22ರಂದು ಸಂಸತ್ತಿನಲ್ಲಿ ಸಂಸದರು ನೋಟಿನ ಕಂತೆಗಳ ಪ್ರದರ್ಶನ ನಡೆಸಿದ್ದು ಈ ಅಧಿಕಾರಾವಧಿಯ ಅತ್ಯಂತ ಕೆಟ್ಟ ಕ್ಷಣಗಳು ಎಂದು ಹೇಳಿದ್ದಾರೆ.

"ಅದೊಂದು ವಿಶೇಷ ಅವಕಾಶ.... ಇದನ್ನು ತಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಆದರೆ ತನಗೆ ಅದು ಲಭಿಸಿತು" ಎಂದು ಚಟರ್ಜಿ ಅವರು ಸಂಸತ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು. ಪ್ರಸಕ್ತ 14ನೆ ಲೋಕಸಭೆಯ ಕೊನೆಯ ಅಧಿವೇಶನದ ಕೊನೆಯ ದಿನದಂದು ಅವರು ತಮ್ಮ ಸ್ಪೀಕರ್ ಅನುಭವವನ್ನು ಹಂಚಿಕೊಂಡರು.

ಹಲವಾರು ವಿವಾದಾಸ್ಪದ ಚರ್ಚೆಗಳು ನಡೆದ ಪ್ರಮುಖ ಲೋಕಸಭೆಯ ಸ್ಪೀಕರ್ ಆಗಿ ಅವರು ಸೇವೆಸಲ್ಲಿಸಿದ್ದಾರೆ. ಲೋಕಸಭೆಯಲ್ಲಿ 2008ರ ಜುಲೈ 22ರಂದು ಅವಿಶ್ವಾಸ ಗೊತ್ತುವಳಿಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ, ಸರ್ಕಾರದ ಪರ ಮತದಾನ ನೀಡಲು ನೋಟಿನ ಆಮಿಷ ನೀಡಲಾಗಿದೆ ಎಂದು ಆರೋಪಿಸುತ್ತಾ ಹಣದ ಪ್ರದರ್ಶನ ಮಾಡಿದ ವೋಟಿಗಾಗಿ ನೋಟು ಘಟನೆ ತನ್ನ ಅವಧಿಯ ಅತ್ಯಂತ ಕೆಟ್ಟ ಘಟನೆ ಎಂದು ನುಡಿದರು.

ಹಲವಾರು ಬಾರಿ ಸಂಸದರ ದುರ್ನಡತೆಯ ಕುರಿತು ಕೋಪ ವ್ಯಕ್ತಪಡಿಸಿರುವ ಚಟರ್ಜಿ, ಕೆಲವೊಮ್ಮೆ ರಾಜೀನಾಮೆ ಬೆದರಿಕೆಯನ್ನೂ ಹಾಕಿದ್ದರು. ಇದಕ್ಕಾಗಿ 'ಹೆಡ್‌ಮಾಸ್ಟರ್' ಎಂಬುದಾಗಿ ಕರೆಸಿಕೊಂಡಿರುವುದಕ್ಕೆ ತನಗೇನು ಬೇಸರವಿಲ್ಲ ಎಂದೂ ಅವರು ಈ ಸಂದರ್ಭದಲ್ಲಿ ನುಡಿದರು.

"ಹೆಡ್‌ಮಾಸ್ಟರ್ ಅವರಲ್ಲಿ ಏನು ಕಳಂಕವಿದೆ. ಅದೊಂದು ಉತ್ತಮ ವೃತ್ತಿ. ನಾವು ಅವರನ್ನು ಗೌರವಿಸುವುದಿಲ್ಲವೆ? ಅದು ಹೇಗೆ ಅವಮಾನಕರ" ಎಂದು ಅವರು ಪ್ರಶ್ನಿಸಿದರು.

ಶಾಸಕಾಂಗದ ಉನ್ನತ ಮಟ್ಟವನ್ನು ಎತ್ತಿಹಿಡಿದಿರುವ ಮಾಜಿ ಸಿಪಿಐ(ಎಂ) ಸದಸ್ಯ ಚಟರ್ಜಿ ಅತ್ಯುತ್ತಮ ಗೌರವ ಪಡೆದಿದ್ದಾರೆ. ತನ್ನ ಉತ್ತರಾಧಿಕಾರಿಗಳು ತನಗಿಂತ ಹೆಚ್ಚಿನ ಶ್ಲಾಘನೆಯನ್ನು ತರಲಿದ್ದಾರೆ ಎಂಬ ಆಶಾಭಾವನೆಯನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿ ಹಿಂದೆ ದಾವೂದ್ ಕೈವಾಡ ?
26/11: ಇಬ್ಬರು ಭಾರತೀಯರ ಪ್ರಧಾನ ಪಾತ್ರ
ಪಾಕ್‌ಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಬೇಕು: ಮೋದಿ
ಸರ್ಕಾರಿ ನೌಕರರಿಗೆ ಶೇ.6 ತುಟ್ಟಿ ಭತ್ಯೆ ಹೆಚ್ಚಳ
ಮದ್ರಾಸ್ ಘರ್ಷಣೆ: ನ್ಯಾಯಾಂಗ ತನಿಖೆಗೆ ಸುಪ್ರೀಂ ಆದೇಶ
ಕೋಲ್ಕತಾ ಬೀದಿಯಲ್ಲಿ ಸುರಿದ ಹಣದ ಮಳೆ!