ರಾಜಕಾರಣಿಯಾಗಿ ಪರಿವರ್ತಿತವಾಗಿರುವ ಗ್ಯಾಂಗ್‌ಸ್ಟರ್ ಅರುಣ್ ಗಾವ್ಲಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷದ(ಬಿಎಸ್ಪಿ) ಬ್ಯಾನರಿನಡಿ ಸ್ಪರ್ಧಿಸಲಿದ್ದಾರೆ.
ನೈರುತ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದ ಗಾವ್ಲಿಯನ್ನು ಕಣಕ್ಕಿಳಿಸಲು ಬಿಎಸ್ಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ತನ್ನ ಅನುಯಾಯಿಗಳಿಂದ 'ಡ್ಯಾಡಿ' ಎಂದು ಕರೆಸಿಕೊಳ್ಳುವ ಗಾವ್ಲಿ, ಮುಂಬೈನ ಬೈಕುಲ್ಲಾ ಸಾತ್ ರಸ್ತಾದ ದಗ್ದಿ ಚಾವ್ಲ್ ಮೂಲದಾತ. 2004ರ ವಿಧಾನ ಸಭಾ ಚುನಾವಣೆಯಲ್ಲಿ ಆತ ಚಿಂಚ್‌ಪೋಕ್ಲಿ ಕ್ಷೇತ್ರದಿಂದ ಅಖಿಲ ಭಾರತೀಯ ಸೇನಾ ಅಭ್ಯರ್ಥಿಯಾಗಿ ಸ್ಫರ್ಧಿಸಿ ಶಾಸಕನಾಗಿ ಆಯ್ಕೆಯಾಗಿದ್ದರು.
ಸಿನಿಮಾ ತಾರೆಯರು ಇಲ್ಲ ಏತನ್ಮಧ್ಯೆ, ತನ್ನ ಪಕ್ಷವು ಮುಂಬರುವ ಚುನಾವಣೆಯಲ್ಲಿ ಯಾವುದೇ ಸಿನಿಮಾ ತಾರೆಯರನ್ನು ಕಣಕ್ಕಿಳಿಸುವುದಿಲ್ಲ ಎಂಬುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ಅಲ್ಲದೆ ಇತರ ಯಾವುದೇ ಪಕ್ಷಗಳೊಂದಿಗೆ ಚುನಾವಣಾಪೂರ್ವ ಮೈತ್ರಿಯನ್ನೂ ಮಾಡಿಕೊಳ್ಳುವುದಿಲ್ಲ ಎಂದು ರಾಜ್ ಸ್ಪಷ್ಟಪಡಿಸಿದ್ದಾರೆ. |