ಮುಂದಿನ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆಸಲುದ್ದೇಶಿಸಿರುವ ಗಾಂಧೀಜಿಯವರ ವಸ್ತುಗಳ ಏಲಂ ಅನ್ನು ತಡೆಯಲು ನಿರ್ಧರಿಸಲಿರುವ ಭಾರತ ಸರ್ಕಾರ, ಈ ವಸ್ತುಗಳನ್ನು ಮರಳಿ ಭಾರತಕ್ಕೆ ತರಲು ನಿರ್ಧರಿಸಿದೆ.ಈ ವಸ್ತುಗಳಲ್ಲಿ ಅವರ ಸುಪ್ರಸಿದ್ಧ ಲೋಹ ಚೌಕಟ್ಟಿನ ಕನ್ನಡಕ, ಅವರ ಚಪ್ಪಲಿಗಳು, ವಾಚು ಹಾಗೂ ಕೆಲವು ಪಾತ್ರೆಗಳು ಸೇರಿವೆ. ಸರ್ಕಾರವು ಈ ವಸ್ತುಗಳನ್ನು ಹೊಂದಿರುವವರನ್ನು ನೇರವಾಗಿ ಸಂಪರ್ಕಿಸಿ, ಇವುಗಳನ್ನು ಮಾರಾಟ ಮಾಡದೆ, ತನಗೊಪ್ಪಿಸುವಂತೆ ಸರ್ಕಾರ ವಿನಂತಿಸಲಿದೆ.ಒಂದೊಮ್ಮೆ ಆವರು ಒಪ್ಪದೇ ಇದ್ದರೆ, ಸರ್ಕಾರವು ಏಲಂದಾರರನ್ನು ಸಂಪರ್ಕಿಸಿ ಈ ವಸ್ತುಗಳನ್ನು ಏಲಂ ಪಟ್ಟಿಯಿಂದ ತೆಗೆದು ಹಾಕಲು ವಿನಂತಿಸಲಿದೆ. ಇಲ್ಲೂ ವಿಫಲವಾದರೆ, ಯಾವುದಾದರೂ ಅನಿವಾಸಿ ಭಾರತೀಯರು ಅಥವಾ ಸಂಘಟನೆಗೆ ಇವುಗಳನ್ನು ಖರೀದಿಸುವಂತೆ ಹೇಳಿ, ಬಳಿಕ ಅವುಗಳನ್ನು ಭಾರತಕ್ಕೆ ನೀಡುವಂತಿ ವಿನಂತಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. |