ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್‌ಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಶನಿವಾರ ಜಾಮೀನು ಮಂಜೂರು ಮಾಡಿದೆ.
ನಕಲಿ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಟಿಎಸ್ 90 ದಿನಗಳೊಳಗಾಗಿ ಆರೋಪಪಟ್ಟಿ ಸಲ್ಲಿಸಲು ವಿಫಲವಾಗಿರುವ ಬಳಿಕ ಪುರೋಹಿತ್‌ಗೆ ಜಾಮೀನು ಲಭಿಸಿದೆ. 15 ಸಾವಿರ ರೂಪಾಯಿ ಮುಚ್ಚಳಿಕೆಯೊಂದಿಗೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಶಿರಿಸ್ ದಾತೆ ಎಂಬ ಎಂಬ ಪುಣೆ ಮೂಲದ ಸ್ನೇಹಿತ ಪುರೋಹಿತ್ ವಿರುದ್ಧ ನಕಲಿ ಪರವಾನಗಿ ಪ್ರಕರಣ ದಾಖಲಿಸಿದ್ದರು. ಶ್ರೀಕಾಂತ್ ನಕಲಿ ದಾಖಲೆಗಳನ್ನು ಸೃಷ್ಟಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಆದರೆ, ಪುರೋಹಿತ್ ಇತರ ಮೂರು ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕಾರಣ ಜೈಲಿನಲ್ಲೇ ಉಳಿಯಬೇಕಿದೆ. ಮಾಲೆಗಾಂವ್, ಜಲ್ನಾ ಮತ್ತು ನಂದೇಡ್ ಸ್ಫೋಟ ಪ್ರಕರಣಗಳಲ್ಲಿ ಪುರೋಹಿತ್ ಆರೋಪಿಯಾಗಿದ್ದಾರೆ. |