ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಓಟಿಗಾಗಿ 'ನೋಟು': ಚುನಾವಣೆ ವೆಚ್ಚ 10 ಸಾವಿರ ಕೋಟಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓಟಿಗಾಗಿ 'ನೋಟು': ಚುನಾವಣೆ ವೆಚ್ಚ 10 ಸಾವಿರ ಕೋಟಿ!
ಮತ್ತೆ ಚುನಾವಣೆಗಳು ಓಡೋಡಿ ಬರುತ್ತಿದೆ. ಆದರೆ ಈ ಬಾರಿಯ ಚುನಾವಣೆಗೆ ಆಗಲಿರುವ ವೆಚ್ಚವೆಷ್ಟು ಗೊತ್ತೇ? 1995-96ರ ಅವಧಿಯಲ್ಲಿ ಭಾರತವು ಪಡೆದುಕೊಂಡ ವಿದೇಶೀ ನೇರ ಬಂಡವಾಳದಷ್ಟು! ಅಂದರೆ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ!

ಚುನಾವಣಾ ಆಯೋಗವು ಖರ್ಚು ಮಾಡಬೇಕಾದ 1300 ಕೋಟಿ ರೂಪಾಯಿಗಳು ಸೇರಿದಂತೆ ಅಧಿಕೃತ ವೆಚ್ಚದ ಮಿತಿಯು ಒಟ್ಟು ಖರ್ಚಿನ ಶೇ.20 ಆಗಿದ್ದರೂ, ಉಳಿದದ್ದನ್ನು ರಾಜಕೀಯ ಪಕ್ಷಗಳು 'ಹಣದ ಹೊಳೆ' ಹರಿಸಿಬಿಡುತ್ತವೆ ಎನ್ನುತ್ತದೆ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ಕೈಗೊಂಡಿರುವ ಸಮೀಕ್ಷೆ.

2000ದಿಂದ 2500 ಕೋಟಿ ರೂಪಾಯಿಗಳನ್ನು 'ಅನಧಿಕೃತ ಹಣ'ದ ರೂಪದಲ್ಲಿ ಅಥವಾ ಮತದಾರರಿಗೆ ಹಂಚಲೆಂದು ಇದರಲ್ಲಿ ವ್ಯಯಿಸಲಾಗುತ್ತದೆ. ಮತಗಳನ್ನು ಖರೀದಿ ಮಾಡುವವರ ಪಟ್ಟಿಯಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶ ಅಗ್ರಸ್ಥಾನವನ್ನು ಅಲಂಕರಿಸಲಿದೆ. ಅಂದರೆ ಇಲ್ಲಿ ಮತದಾನ ನಡೆಯುವ 24 ಗಂಟೆಗಳಲ್ಲಿ ಇದರ ಅರ್ಧಾಂಶ ಹಣವನ್ನು 'ಓಟಿಗಾಗಿ ನೋಟು' ರೂಪದಲ್ಲಿ ಹಂಚಲಾಗುತ್ತದೆ ಎನ್ನುತ್ತದೆ ಸಿಎಂಎಸ್ ಸಮೀಕ್ಷೆ.

ಜನಪ್ರತಿನಿಧಿಗಳನ್ನು ಆರಿಸಿ, ಹೊಸ ಲೋಕಸಭೆಯಲ್ಲಿ ಕೂರಿಸಲು ಚುನಾವಣಾ ಆಯೋಗವು 1300 ಕೋಟಿ ರೂ.ಗಳನ್ನು ವ್ಯಯಿಸುವ ಅಂದಾಜಿದ್ದರೆ, ರಾಜ್ಯ ಸರಕಾರಗಳು ಮತ್ತು ಇತರ ಸರಕಾರೀ ಏಜೆನ್ಸಿಗಳು ಭಾವಚಿತ್ರವಿರುವ ಗುರುತಿನ ಚೀಟಿ, ಮತದಾನ ಯಂತ್ರಗಳು ಮತ್ತು ಮತದಾನ ಕೇಂದ್ರಗಳಿಗಾಗಿ ಸುಮಾರು 700 ಕೋಟಿ ರೂ. ವ್ಯಯಿಸುವ ನಿರೀಕ್ಷೆಯಿದೆ. ಉಳಿದದ್ದೆಲ್ಲಾ ರಾಜಕೀಯ ಪಕ್ಷಗಳ ಹಣದ ಹೊಳೆಯೇ. ಎಷ್ಟೇ ಖರ್ಚು ಮಾಡಿದರೂ ಒಮ್ಮೆ ಆರಿಸಿ ಬಂದರೆ ಸಾಕಲ್ಲವೇ ಕಳೆದು ಹೋದದ್ದನ್ನು ಮರಳಿ ಪಡೆಯಲು ಎಂಬ ಅಭಿಪ್ರಾಯ ಕಳೆದ ಲೋಕಸಭೆಯಲ್ಲಿ ಕಂಡ 'ಓಟಿಗಾಗಿ ನೋಟು' ಪ್ರಕರಣದಿಂದ ಜನರ ಮನಸ್ಸಿನಲ್ಲಿ ಸುಳಿದಾಡುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸ್ಲಮ್' ಬಾಲಕನಿಗೆ ಬಡಿದ ಅಪ್ಪ ಇಸ್ಮಾಯಿಲ್!
ಉಗ್ರರು ಸಮುದ್ರಮಾರ್ಗ ಬಳಸಿದ್ದಾರೆ: ಆಂಟನಿ
ವೃದ್ಧ ರೈತರಿಗೆ ಎನ್‌ಡಿಎಯಿಂದ ಪಿಂಚಣಿ: ಆಡ್ವಾಣಿ
ಪುರೋಹಿತ್‌ಗೆ ಸಿಕ್ಕರೂ ದಕ್ಕದ ಜಾಮೀನು
ಪಾಕಿಗೆ ಸಹಾಯ ನಿಲ್ಲಿಸಿ: ಅಮೆರಿಕಕ್ಕೆ ಭಾರತ
ಗಾಂಧೀಜಿ ವಸ್ತುಗಳ ಏಲಂ ತಡೆಗೆ ಸರ್ಕಾರದ ಕ್ರಮ