ಮುಂಬರುವ ಲೋಕಸಭಾ ಚುನಾವಣಾ ದಿನಾಂಕಗಳನ್ನು ನಿರ್ಧರಿಸಲು ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ನೇತೃತ್ವದ ತ್ರಿಸದಸ್ಯ ಚುನಾವಣಾ ಆಯೋಗವು ಸೋಮವಾರ ಸಭೆ ಸೇರಲಿದೆ.
ಸೋಮವಾರ ಅಪರಾಹ್ನ ಅಥವಾ ಮಂಗಳವಾರ ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ಘೋಷಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಚುನಾವಣೆಗಳು ಆರು ಅಥವಾ ಏಳು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆಯು ಎಪ್ರಿಲ್ 12ರಂದು ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಇದರೊಂದಿಗೆ ಆಂಧ್ರಪ್ರದೇಶ, ಒರಿಸ್ಸಾ ಹಾಗೂ ಸಿಕ್ಕಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಅವುಗಳ ದಿನಾಂಕವನ್ನೂ ಚುನಾವಣಾ ಆಯೋಗ ಘೋಷಿಸಲಿದೆ. |