ನ್ಯುಮೋನಿಯಾ ಹಾಗೂ ಹೃದಯದ ಕಟ್ಟುವಿಕೆ ಸಮಸ್ಯೆಗೆ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಹತ್ತಿರಹತ್ತಿರ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಒದಗಿಸಲಾಗಿತ್ತು.ದಕ್ಷಿಣ ದೆಹಲಿಯ ಪ್ರಮುಖ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದ ವಾಜಪೇಯಿ ಅವರು ಭಾನುವಾರ ಸಾಯಂಕಾಲದ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಅವರ ಕುಟುಂಬಿಕರು ಮತ್ತು ಅಭಿಮಾನಿಗಳು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಅವರ ಆರೋಗ್ಯ ಸುಧಾರಣೆಯಲ್ಲಿ ಸಂತೃಪ್ತಿ ಹೊಂದಿದ್ದು, ಅವರನ್ನು ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ ಎಂದು ಏಮ್ಸ್ ಸುಪರಿಡೆಂಟ್ ಡಿ.ಕೆ. ಶರ್ಮಾ ಹೇಳಿದ್ದಾರೆ.ಮಾತುಗಾರಿಕೆ, ಹಾಸ್ಯಪ್ರಜ್ಞೆ, ಕವಿಮನಸ್ಸಿನ ಖ್ಯಾತಿಯ ಈ ಹಿರಿಯ ರಾಜಕಾರಣಿ ಅವರು ಸ್ಲಮ್‌ಡಾಗ್ ಮಿಲಿಯನೇರ್ ಸಿನಿಮ ಎಂಟು ಪ್ರಶಸ್ತಿ ಪಡೆದ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ತನ್ನ ಕೊಠಡಿಯಲ್ಲಿ ವೀಕ್ಷಿಸಿದ್ದರು. |