ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚೆನ್ನೈ: ಇದೀಗ ಪೊಲೀಸ್ ಪತ್ನಿಯರ ಉಪವಾಸ ಮುಷ್ಕರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನೈ: ಇದೀಗ ಪೊಲೀಸ್ ಪತ್ನಿಯರ ಉಪವಾಸ ಮುಷ್ಕರ
WD
ಮದ್ರಾಸ್ ಹೈಕೋರ್ಟಿನಲ್ಲಿ ಫೆ.19ರಂದು ನಡೆದಿರುವ ಅಹಿತಕರ ಘಟನೆಯ ಬಳಿಕದ ಪೊಲೀಸ್-ವಕೀಲರ ತಿಕ್ಕಾಟ ಸೋಮವಾರ ಹೊಸ ತಿರುವು ಪಡೆದುಕೊಂಡಿದ್ದು, ಪೊಲೀಸ್ ಸಿಬ್ಬಂದಿಗಳ ಪತ್ನಿಯರು ಉಪವಾಸ ಮುಷ್ಕರ ಆರಂಭಿಸಿದ್ದಾರೆ. ವಕೀಲರನ್ನು ಓಲೈಸಲು ಪೊಲೀಸ್ ಸಿಬ್ಬಂದಿಗಳನ್ನು ಬಲಿಪಶುಗಳನ್ನಾಗಿಸಬಾರದು ಎಂಬುದಾಗಿ ಉಪವಾಸ ನಿರತರು ತಮಿಳ್ನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸುಪ್ರೀಂಕೋರ್ಟ್ ನೇಮಿಸಿರುವ ಏಕವ್ಯಕ್ತಿ ಆಯೋಗದ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರು ಪ್ರಾಥಮಿಕ ತನಿಖೆ ಪೂರೈಸಿದ ಮರುದಿನವೇ ಸಾವಿರಾರು ಮಹಿಳೆಯರು ರಾಜ್ಯ ಅತಿಥಿ ಗೃಹ ಮುಂದೆ ನಿರಸನ ಆರಂಭಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳ ಹಾಲಿ ಹಾಗೂ ಮಾಜಿ ಪೊಲೀಸ್ ಸಿಬ್ಬಂದಿಗಳ ಪತ್ನಿಯರು ಉಪವಾಸ ನಿರತರಾಗಿದ್ದಾರೆ.

ಹೈಕೋರ್ಟ್ ಆವರಣದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಪೊಲೀಸ್ ಸಿಬ್ಬಂದಿಗಳು ಪ್ರಯತ್ನಿಸಿದರೂ ಅವರನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದು ದೂರಿರುವ ಮುಷ್ಕರ ನಿರತರು, ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಏಚನ್ಮಧ್ಯೆ, ವಕೀಲರು ತಮ್ಮ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದು, ಎಂಟನೆ ದಿನಕ್ಕೆ ಕಾಲಿರಿಸಿದೆ. ಮದ್ರಾಸ್ ಹೈ ಕೋರ್ಟಿನ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಕೀಲರು ದಾಳಿಗೆ ಜವಾಬ್ದಾರರಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹೈಕೋರ್ಟ್ ಆದೇಶದ ಪ್ರಕಾರ ಸಿಟಿ ಸಿವಿಲ್ ಕೋರ್ಟ್, ಫ್ಯಾಮಿಲಿ ಕೋರ್ಟ್ ಮತ್ತು ಹೈಕೋರ್ಟ್ ಸಂಕೀರ್ಣದಲ್ಲಿರುವ ಇತರ ನ್ಯಾಯಾಲಯಗಳು ಸೋಮವಾರ ಪುನಾರಂಭಿಸಿದ್ದರೂ, ವಕೀಲರು ತಮ್ಮ ಬಹಿಷ್ಕಾರ ಮುಂದುವರಿಸಿದ್ದಾರೆ. ನ್ಯಾಯಮೂರ್ತಿ ಶ್ರೀಕೃಷ್ಣ ಅವರು ಸಲ್ಲಿಸಿರುವ ವರದಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕವೇ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವುದಾಗಿ ವಕೀಲರು ಪಟ್ಟು ಹಿಡಿದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏಮ್ಸ್‌ನಿಂದ ಬಿಡುಗಡೆಗೊಂಡ ವಾಜಪೇಯಿ
ಇಂದು ಚುನಾವಣಾ ದಿನಾಂಕ ಘೋಷಣೆ?
ಕಾಂಗ್ರೆಸ್‌ನೊಂದಿಗೆ ತೃಣಮೂಲ ಕಾಂಗ್ರೆಸ್ ಮೈತ್ರಿ
ಬಿಜೆಪಿ ತೊರೆದು ಬಿಎಸ್‌ಪಿಗೆ ಸೇರ್ಪಡೆ
ಕದನ ವಿರಾಮಕ್ಕೆ ಮನವಿ: ಕರುಣಾನಿಧಿ ತೃಪ್ತಿ
ಸರಬ್‌ಜಿತ್ ಬಿಡುಗಡೆ-ಕೇಂದ್ರದ ನಿಲುವೇನು?: ಹೈಕೋರ್ಟ್