ಅಜಿತ್ ಸಿಂಗ್ ನಾಯಕತ್ವದ ರಾಷ್ಟ್ರೀಯ ಲೋಕ ದಳ(ಆರ್ಎಲ್‌ಡಿ)ವು ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯೊಂದಿಗೆ ತನ್ನ ಮೈತ್ರಿಯನ್ನು ಸೋಮವಾರ ಘೋಷಿಸಿದೆ.
ಅಜಿತ್ ಸಿಂಗ್, ಎನ್‌ಡಿಎ ಸಂಚಾಲಕ ಶರದ್ ಯಾದವ್ ಹಾಗೂ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿಯವರು ನಡೆಸಿದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಲಾಯಿತು. ಭಾರತೀಯ ರಾಜಕಾರಣದಲ್ಲಿ ಇಂದಿನ ದಿನದಲ್ಲಿ ಮೈತ್ರಿಯು ಅತ್ಯಗತ್ಯವಾಗಿದೆ ಎಂದು ಆಡ್ವಾಣಿ ಈ ಸಂದರ್ಭದಲ್ಲಿ ನುಡಿದರು.
ದುರ್ಬಲ ವರ್ಗಗಳು ಮತ್ತು ರೈತರ ಶ್ರೇಯೋಭಿವೃದ್ಧಿಗಾಗಿ ಎನ್‌ಡಿಎ ಶ್ರಮಿಸುತ್ತಿದ್ದು, ಅಜಿತ್ ಸಿಂಗ್ ಸೇರ್ಪಡೆಯಿಂದ ಇದು ಪರಿಪೂರ್ಣವಾಗಿದೆ ಎಂದು ಶರದ್ ಯಾದವ್ ನುಡಿದರು.
ರೈತರ ನಾಯಕ ಹಾಗೂ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಪುತ್ರನಾಗಿರುವ ಅಜಿತ್ ಸಿಂಗ್ ನೇತೃತ್ವದ ಆರ್ಎಲ್‌ಡಿಯು ಪಶ್ಚಿಮ ಉತ್ತರ ಪ್ರದೇಶದ ಕಬ್ಬು ಬೆಳೆಗಾರರ ಬೆಂಬಲ ಪಡೆದಿದೆ.
|