ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎ.16ರಿಂದ ಮೇ 13: ಐದು ಹಂತದಲ್ಲಿ ಲೋ.ಸ ಚುನಾವಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎ.16ರಿಂದ ಮೇ 13: ಐದು ಹಂತದಲ್ಲಿ ಲೋ.ಸ ಚುನಾವಣೆ
PTI
ಮುಂಬರುವ ಲೋಕಸಭಾ ಚುನಾವಣೆಯು ಎಪ್ರಿಲ್ 16ರಿಂದ ಮೇ 13ರ ತನಕ ಒಟ್ಟು ಐದು ಹಂತಗಳಲ್ಲಿ ನಡೆಯಲಿದೆ. ಕರ್ನಾಟಕದ 28 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಎಪ್ರಿಲ್ 23ರಂದು 17 ಕ್ಷೇತ್ರಗಳು ಹಾಗೂ ಎಪ್ರಿಲ್ 30ರಂದು 11 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮತಎಣಿಕೆಯು ಮೇ 16ರಂದು ನಡೆಯಲಿದೆ.

ಸೋಮವಾರ ಬೆಳಗ್ಗಿನಿಂದಲೇ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರವನ್ನು ಕಿಕ್ಕಿರಿದು ತುಂಬಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮುಖ್ಯಚುನಾವಣಾ ಆಯುಕ್ತ ಎನ್. ಗೋಪಾಲ ಸ್ವಾಮಿ ಘೋಷಿಸಿದರು. ಚುನಾವಣಾ ಆಯುಕ್ತರಾದ ನವೀನ್ ಚಾವ್ಲಾ ಮತ್ತು ಎಸ್.ವೈ. ಖುರೇಷಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿವಿಧ ರಾಜ್ಯಗಳಲ್ಲಿ ಒಟ್ಟು ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆಯು ತಕ್ಷಣದಿಂದ ಜಾರಿಗೆ ಬರಲಿದೆ.

ಲೋಕಸಭಾ ಚುನಾವಣೆಯೊಂದಿಗೆ ಒರಿಸ್ಸಾ, ಆಂಧ್ರಪ್ರದೇಶ ಮತ್ತು ಸಿಕ್ಕಿಂನಲ್ಲಿ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಇದಲ್ಲದೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಏಳು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಕರ್ನಾಟಕದ ಒಂದು ಸ್ಥಾನದಲ್ಲಿ ಉಪಚುನಾವಣೆ ನಡೆಯಲಿದೆ.

ರಾಷ್ಟ್ರದಲ್ಲಿ ಒಟ್ಟು 714 ಮಿಲಿಯ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಒಟ್ಟು 40ಲಕ್ಷಕ್ಕೂ ಅಧಿಕ ಚುನಾವಣಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಕಳೆದ 2004ರ ಚುನಾವಣೆಗಿಂತ ಈ ಬಾರಿ 43 ಮಿಲಿಯ ಹೆಚ್ಚು ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ.

ಜಮ್ಮು ಕಾಶ್ಮೀರ, ಅಸ್ಸಾಂ ಮತ್ತು ನಾಗಾಲ್ಯಾಂಡ್ ಹೊರತು ಪಡಿಸಿದಂತೆ ಉಳಿದೆಲ್ಲೆಡೆ ಪ್ರಥಮ ಬಾರಿಗೆ ಭಾವಚಿತ್ರವಿರುವ ಮತಪಟ್ಟಿಗಳನ್ನು ಬಳಸಲಾಗುತ್ತಿದೆ. ಒಟ್ಟು 543ರಲ್ಲಿ 522 ಕ್ಷೇತ್ರಗಳಲ್ಲಿ ಭಾವಚಿತ್ರವಿರುವ ಮತಪಟ್ಟಿಗಳನ್ನು ಬಳಸಲಾಗುತ್ತದೆ ಎಂದು ಗೋಪಾಲಸ್ವಾಮಿ ತಿಳಿಸಿದರು.

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ:

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 23ರಂದು ಮೊದಲ ಹಂತದ ಮತದಾನ ನಡೆದರೆ, ಏ.30ರಂದು 2ನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ 17ಕ್ಷೇತ್ರಗಳಲ್ಲಿ ಚುನಾವಣೆ- ಬೆಂಗಳೂರು ನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ,ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಗುಲ್ಬರ್ಗಾ, ಚಿಕ್ಕೋಡಿ, ಬೆಳಗಾವಿ,ರಾಯಚೂರು, ಕೊಪ್ಪಳ,ಬಳ್ಳಾರಿ,ಬೀದರ್ (ಕ್ಷೇತ್ರದ ಉಪಚುನಾವಣೆ), ಬಿಜಾಪುರ, ಉತ್ತರ ಕನ್ನಡ, ತುಮಕೂರು.

ಎರಡನೇ ಹಂತದಲ್ಲಿ 11ಕ್ಷೇತ್ರಗಳಲ್ಲಿ- ಬಾಗಲಕೋಟೆ, ಹಾವೇರಿ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಚಾಮರಾಜನಗರ, ದಾವಣಗೆರೆ.

ಚುನಾವಣಾ ವೇಳಾ ಪಟ್ಟಿ
ಒಟ್ಟು ಕ್ಷೇತ್ರಗಳು: 543

ಮೊದಲ ಹಂ
ದಿನಾಂಕ- ಎಪ್ರಿಲ್ 16
ಚುನಾವಣೆ ನಡೆಯುವ ಕ್ಷೇತ್ರಗಳು- 124

ಎರಡನೆ ಹಂ
ದಿನಾಂಕ- ಎಪ್ರಿಲ್ 23
ಕ್ಷೇತ್ರಗಳು- 141
(ಸ್ಥಳೀಯ ರಜೆಯ ಕಾರಣ ಮಣಿಪುರದ ಒಂದು ಕ್ಷೇತ್ರದಲ್ಲಿ ಎಪ್ರಿಲ್ 22ರಂದು ಮತದಾನ)

ತೃತೀಯ ಹಂ
ದಿನಾಂಕ- ಎಪ್ರಿಲ್ 30
ಕ್ಷೇತ್ರಗಳು- 107

ನಾಲ್ಕನೆ ಹಂ
ದಿನಾಂಕ- ಮೇ 07
ಕ್ಷೇತ್ರಗಳು- 85

ಐದನೆ ಹಂ
ದಿನಾಂಕ- ಮೇ 13
ಕ್ಷೇತ್ರಗಳು 86

ಜಮ್ಮು ಕಾಶ್ಮೀರ ಹಾಗೂ ಉತ್ತರ ಪ್ರದೇಶ - 5 ಹಂತಗಳಲ್ಲಿ, ಬಿಹಾರದಲ್ಲಿ 4 ಹಂತಗಳಲ್ಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳಗಳಲ್ಲಿ ಮೂರು ಹಂತಗಳಲ್ಲಿ ಮತ್ತು ಕರ್ನಾಟಕ, ಮಧ್ಯಪ್ರದೇಶ, ಆಸ್ಸಾಂ, ಜಾರ್ಖಂಡ್, ಮಣಿಪುರ, ಒರಿಸ್ಸಾ, ಪಂಜಾಬ್, ಆಂಧ್ರಪ್ರದೇಶಗಳಲ್ಲಿ 2 ಹಂತಗಳ ಚುನಾವಣೆ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಉಳಿದ 15 ರಾಜ್ಯಗಳಲ್ಲಿ ಏಕಹಂತದ ಚುನಾವಣೆ ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಜಿತ್ ಸಿಂಗ್ ಆರ್ಎಲ್‌ಡಿಯೊಂದಿಗೆ ಬಿಜೆಪಿ ಮೈತ್ರಿ
ಚೆನ್ನೈ: ಇದೀಗ ಪೊಲೀಸ್ ಪತ್ನಿಯರ ಉಪವಾಸ ಮುಷ್ಕರ
ಏಮ್ಸ್‌ನಿಂದ ಬಿಡುಗಡೆಗೊಂಡ ವಾಜಪೇಯಿ
ಇಂದು ಚುನಾವಣಾ ದಿನಾಂಕ ಘೋಷಣೆ?
ಕಾಂಗ್ರೆಸ್‌ನೊಂದಿಗೆ ತೃಣಮೂಲ ಕಾಂಗ್ರೆಸ್ ಮೈತ್ರಿ
ಬಿಜೆಪಿ ತೊರೆದು ಬಿಎಸ್‌ಪಿಗೆ ಸೇರ್ಪಡೆ