ಹದಿನಾಲ್ಕರ ಹರೆಯದ ಬಾಲಕಿಯೊಬ್ಬಾಕೆಯನ್ನು ಅಪಹರಿಸಿ ಮದುವೆಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ಹೆಡ್‌ಮಾಸ್ಟರ್ ಒಬ್ಬಾತನನ್ನು ಇಲ್ಲಿಗೆ ಸಮೀಪದ ಹಳ್ಳಿಯೊಂದರಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹುಡುಗಿಯ ಹೆತ್ತವರು ನೀಡಿರುವ ದೂರಿನಾಧಾರದಲ್ಲಿ 42ರ ಹರೆಯದ ಆರ್ಮುಗಂ ಎಂಬಾತನನ್ನು ಶನಿವಾರ ಬಂಧಿಸಲಾಗಿದೆ.
ಹುಡುಗಿ ಕಾಣೆಯಾದ ಫೆಬ್ರವರಿ 23ರಂದು ಅಕೆ, ಅರ್ಮುಗಂ ಜತೆ ಇದ್ದಿರುವುದನ್ನು ತಾವು ಕಂಡಿದ್ದೇವೆ ಎಂಬುದಾಗಿ ವಿಲ್ಲಿಯಪತ್ರಿ ಎಂಬ ಗ್ರಾಮದ ಕೆಲವು ನಿವಾಸಿಗಳು ಹೇಳಿದ ಬಳಿಕ ಈ ಬಂಧನ ಮಾಡಲಾಗಿದೆ.
ಹುಡುಗಿಯನ್ನು ತಾನು ಅಪಹರಿಸಿರುವುದಾಗಿ ಪೊಲೀಸರೊಂದಿಗೆ ಒಪ್ಪಿಕೊಂಡಿರುವ ಆರ್ಮುಗಂ, ಆಕೆಯನ್ನು ತಾನು ಲಾಡ್ಜ್ ಒಂದರಲ್ಲಿ ಇರಿಸಿದ್ದಾಗಿ ಮತ್ತು ಬಳಿಕ ಆಕೆಯನ್ನು ಮಧುರೈನ ದೇವಾಲಯ ಒಂದರಲ್ಲಿ ವಿವಾಹವಾಗಿರುವುದಾಗಿ ತಿಳಿಸಿದ್ದಾನೆ.
ಈ 'ಮಧುಮಗ'ನಿಗೆ ಇದೀಗಾಗಲೇ ತಾನು ವರಿಸಿರುವ ನವವಧುವಿನ ವಯಸ್ಸಿನ ಮಗಳು ಹಾಗೂ ಇನ್ನೊಬ್ಬ ಮಗ ಇದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಚಪಲ ಚೆನ್ನಿಗರಾಯನ ಕೃತ್ಯ ಕಂಡ ಊರಿನವರು ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿರಿಸಿದ್ದಾರೆ! |