ಬಿಹಾರಿಗಳ ಆರಾಧ್ಯ ದೈವವಾಗಿರುವ ರೈಲ್ವೇ ಸಚಿವ ಲಾಲೂಪ್ರಸಾದ್ ಯಾದವ್ ಹಾಗೂ ಅವರ ಪತ್ನಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಯವರಿಗಾಗಿ ದೇವಾಲಯ ಒಂದನ್ನು ನಿರ್ಮಿಸಲು ಅವರ ಅಭಿಮಾನಿಗಳು ಮುಂದಾಗಿದ್ದಾರೆ.ಇಲ್ಲಿಂದ 150 ಕಿಲೋ ಮೀಟರ್ ದೂರದಲ್ಲಿರುವ ಕೈಮೂರ್ ಜಿಲ್ಲೆಯಲ್ಲಿ ಈ ದೇವಾಲಯ ನಿರ್ಮಿಸಲಾಗುತ್ತಿದೆ. ಈ ದೇವಾಲಯ ನಿರ್ಮಾಣದ ರೂವಾರಿ ರಾಜೇಶ್ವರ್ ಯಾದವ್ ಅವರು, ಭಾನುವಾರ ನಡೆದ ಭೂಮಿಪೂಜೆಯಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು ಎಂದು ಹೇಳಿದ್ದಾರೆ.ಈ ದೇವಾಲಯ ನಿರ್ಮಾಣಕ್ಕೆ ಹಳ್ಳಿಯ ಮಹಿಳೆಯೊಬ್ಬರು ಜಾಗ ನೀಡಿದ್ದು, ಸುಮಾರು 5.4 ದಶಲಕ್ಷ ರೂಪಾಯಿ ಮೊತ್ತದಲ್ಲಿ ದೇವಾಲಯ ನಿರ್ಮಿಸಲಾಗುತ್ತಿದೆ ಎಂದು ರಾಜೇಶ್ವರ್ ತಿಳಿಸಿದ್ದಾರೆ. |