ಬೈಪಾಸ್ ಶಸ್ತ್ರ ಚಿಕಿತ್ಸೆಯ ಬಳಿಕ ಗಣನೀಯವಾಗಿ ಚೇತರಿಸಿಕೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ತನ್ನ ಪ್ರಥಮ ಅಧಿಕೃತ ಕಾರ್ಯಕ್ರಮ ನಡೆಸಲಿದ್ದು, ಅವರು ಬೆನಿನ್ ಅಧ್ಯಕ್ಷ ಬೋನಿ ಯಾಯಿ ಅವರನ್ನು ಭೇಟಿಯಾಗಲಿದ್ದಾರೆ.ಪಶ್ಚಿಮ ಆಫ್ರಿಕಾ ರಾಷ್ಟ್ರದ ನಾಯಕರೊಂದಿಗೆ ಪ್ರಧಾನಿ ಅವರು ಪ್ರತಿನಿಧಿ ಮಟ್ಟದ ಚರ್ಚೆ ನಡೆಸಲಿದ್ದು, ಕೆಲವು ಒಪ್ಪಂದಗಳಿಗೆ ಸಹಿಹಾಕುವ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಮಾತುಕತೆಯು, ಇಂತಹ ಕಾರ್ಯಕ್ರಮ ನಡೆಯುವ ಹೈದ್ರಾಬಾದ್ ಹೌಸ್ ಬದಲಿಗೆ ಪ್ರಧಾನಿಯವರ ನಿವಾಸದಲ್ಲಿ ನಡೆಯಲಿದೆ.ಪ್ರಧಾನಿಯವರು ಪ್ರಮುಖ ಹಾಗೂ ಅತ್ಯಗತ್ಯದ ಅಧಿಕೃತ ಕಾರ್ಯಗಳಿಗೆ ತನ್ನ ನಿವಾಸದಲ್ಲೇ ಭಾಗವಹಿಸುತ್ತಿದ್ದರಾದರೂ, ಬೆನಿನ್ ಅಧ್ಯಕ್ಷರೊಂದಿಗಿನ ಭೇಟಿಯು ಶಸ್ತ್ರಕ್ರಿಯೆ ಬಳಿಕ ಅವರ ಪ್ರಥಮ ಅಧಿಕೃತ ಕಾರ್ಯಕ್ರಮವಾಗಲಿದೆ. |