ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಜೈ ಹೋ'ದ ಕಾಪಿರೈಟ್ ಪಡೆದ ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಜೈ ಹೋ'ದ ಕಾಪಿರೈಟ್ ಪಡೆದ ಕಾಂಗ್ರೆಸ್
IFM
ಭಾರತಕ್ಕೆ ಆಸ್ಕರ್ ಪ್ರಶಸ್ತಿ ತಂದು ಕೊಟ್ಟ ಸ್ಲಂಡಾಮ್ ಮಿಲಿಯನೇರ್ ಸಿನಿಮಾದ ಜನಪ್ರಿಯ ಹಾಡು ಜೈ ಹೋ ಹಾಡಿನ ಹಕ್ಕುಗಳನ್ನು ತನ್ನ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷ ಪಡೆದಿದೆ.

ಈ ಹಾಡಿನ ಸಾಹಿತ್ಯ ಹಾಗೂ ಸಂಗೀತದ ಹಕ್ಕುಗಳನ್ನು ಮುಂದಿನ ಮಹಾಚುನಾವಣಾ ಸಮರದಲ್ಲಿ ಮತದಾರರ ಓಲೈಕೆಗಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ವಿರೋಧಿ ಪಕ್ಷಗಳು ಈ ಹಾಡಿನತ್ತ ಆಸಕ್ತವಾಗಿರುವ ವಾಸನೆ ಬಡಿಯುತ್ತಲೇ, ತನ್ನ ಕಾರ್ಯವನ್ನು ತ್ವರಿತಗೊಳಿಸಿದ ಕಾಂಗ್ರೆಸ್ ಹಕ್ಕುಗಳನ್ನು ಪಡೆಯುವಲ್ಲಿ ಸಫಲವಾಗಿದೆ.

ಭಾರತದ ಸಂಗೀತ ಮಾಂತ್ರಿಕ ಎ.ಆರ್. ರೆಹ್ಮಾನ್ ಹಾಗೂ ಸಾಹಿತಿ ಗುಲ್ಜಾರ್ ಅವರಿಗೆ ಆಸ್ಕರ್ ಪ್ರಶಸ್ತಿ ತಂದಿಟ್ಟಿರುವ ಜೈ ಹೋ ಹಾಡು ಹಿಂದೆಂದೂ ಇಲ್ಲದ ಜನಪ್ರಿಯತೆ ತಂದಿಟ್ಟಿದೆ. ಈ ಹಾಡಿಗೆ ಭಾಷೆ ಪ್ರಾಂತ್ಯಗಳನ್ನು ಮೀರಿ ಜನತೆಯನ್ನು ತಟ್ಟುವ ಸಾಮರ್ಥ್ಯವಿರುವ ಕಾರಣ ಪಕ್ಷದ ವ್ಯವಸ್ಥಾಪಕರು ಇದರತ್ತ ಆಕರ್ಷಿತರಾಗಿದ್ದಾರೆ ಎಂದು ಹೇಳಿರುವ ಮೂಲಗಳು, ಇದು ಯಾವದೇ ಪ್ರಾಂತ್ಯ, ಭಾಷೆ ಅಥವಾ ಪಂಗಡದ ಹಂಗಿಲ್ಲದಂತೆ ಇದು ಎಲ್ಲರನ್ನೂ ರಂಜಿಸುತ್ತದೆ ಎಂದು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್ ಕಾವಲಿಗೆ ಐಟಿಬಿಪಿ ಸಿಬ್ಬಂದಿಗಳು
ರಾಜಕೀಯ ಮಹತ್ವಾಕಾಂಕ್ಷೆ ತನಗಿಲ್ಲ: ಪ್ರಿಯಾಂಕ
ಜಾರ್ಖಂಡ್‌ನಲ್ಲಿ ತೃತೀಯ ರಂಗ
ಅಮೇಥಿಗೆ ಭೇಟಿಯಿತ್ತ ಪ್ರಿಯಾಂಕ
ಚೇತರಿಸಿಕೊಂಡ ಪ್ರಧಾನಿಯ ಪ್ರಥಮ ಅಧಿಕೃತ ಸಭೆ
ಲಾಲೂ, ರಾಬ್ರಿ ದೇವಾಲಯಕ್ಕೆ ಭೂಮಿಪೂಜೆ!