ಬಾಂಗ್ಲಾದೇಶದ ಸೈನಿಕ ದಂಗೆಯ ಹಿನ್ನೆಲೆಯಲ್ಲಿ ಯಾವುದೇ ಸಂಭಾವ್ಯ ತುರ್ತುಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ಹೆಚ್ಚಿನ ಪಡೆಗಳನ್ನು ಪಶ್ಚಿಮಬಂಗಾಳಕ್ಕೆ ರವಾಸಿದೆ.
50 ಸ್ವತಂತ್ರ ಪ್ಯಾರಾಚೂಟ್ ಬ್ರಿಗೇಡ್ ಭಾನುವಾರ ಆಗ್ರಾದಿಂದ ಕಲೈಕುಂಡಕ್ಕೆ ಚಲಿಸಿದೆ. ಇಲ್ಲಿ ದೊಡ್ಡದಾದ ವಾಯುಪಡೆ ನೆಲೆ ಇದೆ. ಪರಿಸ್ಥಿತಿಗನುಗುಣವಾಗಿ ಇನ್ನಷ್ಟು ಪಡೆಗಳನ್ನು ರವಾನಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಂಗ್ಲಾ ನೆಲದಿಂದ ನಡೆಯುತ್ತಿರುವ ಭಾರತ ವಿರೋಧಿ ಭಯೋತ್ಪಾದನಾ ಕೃತ್ಯವನ್ನು ತೊಡೆದುಹಾಕಲು ಬಂಗ್ಲಾದ ದೃಢ ಸಹಕಾರವನ್ನು ಭಾರತ ಬಯಸುತ್ತಿದ್ದು, ಉಭಯ ರಾಷ್ಟ್ರಗಳು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಭಯೋತ್ಪಾದನಾ ವಿರೋಧಿ ಕವಾಯತನ್ನು ಹಮ್ಮಿಕೊಳ್ಳಲು ಮೊತ್ತ ಮೊದಲ ಬಾರಿಗೆ ಒಂದಾಗಿವೆ. |