ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಕೆಲಸಕ್ಕೆ ಹಾಜರಾದ' ಪ್ರಧಾನಿ ಮನಮೋಹನ್ ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಕೆಲಸಕ್ಕೆ ಹಾಜರಾದ' ಪ್ರಧಾನಿ ಮನಮೋಹನ್ ಸಿಂಗ್
PTI
ಬೈಪಾಸ್ ಶಸ್ತ್ರಕ್ರಿಯೆಗೊಳಗಾಗಿ ಚೇತರಿಸಿಕೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್, ಐದು ವಾರಗಳ ಬಳಿಕ ಬುಧವಾರ ಕರ್ತವ್ಯಕ್ಕೆ ಮರಳಿದ್ದಾರೆ. ಈ ಅನಾರೋಗ್ಯದ ಅಂತರದ ಬಳಿಕ ಮೊದಲ ಅಧಿಕೃತ ಕಾರ್ಯಕ್ರಮವಾಗಿ ಬೆನಿನ್ ಅಧ್ಯಕ್ಷ ಬೋನಿ ಯಾಯಿ ಅವರನ್ನು ತಮ್ಮ ಅಧಿಕೃತ ನಿವಾಸದಲ್ಲಿ ಭೇಟಿಯಾದರು.

ಪಶ್ಚಿಮ ಆಫ್ರಿಕಾ ರಾಷ್ಟ್ರದ ನಾಯಕರೊಂದಿಗೆ ಪ್ರಧಾನಿ ಅವರು ಪ್ರತಿನಿಧಿ ಮಟ್ಟದ ಚರ್ಚೆ ನಡೆಸಿದ್ದು, ಕೆಲವು ಒಪ್ಪಂದಗಳಿಗೆ ಸಹಿಹಾಕುವ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಈ ಮಾತುಕತೆಯು, ಇಂತಹ ಕಾರ್ಯಕ್ರಮ ನಡೆಯುವ ಹೈದ್ರಾಬಾದ್ ಹೌಸ್‌ ಬದಲಿಗೆ ಪ್ರಧಾನಿಯವರ ನಿವಾಸದಲ್ಲಿ ನಡೆದಿದೆ. ಪ್ರಧಾನಿಯವರಿಗೆ ಬಳಲಿಕೆ ತಪ್ಪಿಸುವ ದೃಷ್ಟಿಯಿಂದ ಕಾರ್ಯಕ್ರಮದಲ್ಲಿ ಈ ಬದಲಾವಣೆ ಮಾಡಲಾಗಿದೆ.

ಪ್ರಧಾನಿಯವರು ಪ್ರಮುಖ ಹಾಗೂ ಅತ್ಯಗತ್ಯದ ಅಧಿಕೃತ ಕಾರ್ಯಗಳಿಗೆ ತನ್ನ ನಿವಾಸದಲ್ಲೇ ಭಾಗವಹಿಸುತ್ತಿದ್ದರಾದರೂ, ಬೆನಿನ್ ಅಧ್ಯಕ್ಷರೊಂದಿಗಿನ ಭೇಟಿಯು ಶಸ್ತ್ರಕ್ರಿಯೆ ಬಳಿಕ ಅವರ ಪ್ರಥಮ ಅಧಿಕೃತ ಕಾರ್ಯಕ್ರಮವಾಗಿದೆ.

76ರ ಹರೆಯದ ಸಿಂಗ್ ಅವರು ಜನವರಿ 24ರಂದು ರೆಡೋ ಕೊರೊನರಿ ಅರ್ಟಿರಿ ಬೈಪಾಸ್ ಸರ್ಜರಿಗೊಳಗಾಗಿದ್ದರು. ಅವರ ಹೃದಯದ ರಕ್ತನಾಳಗಳಲ್ಲಿ ಉಂಟಾಗಿದ್ದ ಐದು ತಡೆಗಳನ್ನು ತಡೆಯಲು ಏಮ್ಸ್ ಆಸ್ಪತ್ರೆಯಲ್ಲಿ ಈ ಶಸ್ತ್ರಕ್ರಿಯೆ ನಡೆಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಂಗ್ಲಾ ದಂಗೆ: ಪ.ಬಂಗಾಳಕ್ಕೆ ಹೆಚ್ಚಿನ ಪಡೆ
ಕಸಬ್ ಕಾವಲಿಗೆ ಐಟಿಬಿಪಿ ಸಿಬ್ಬಂದಿಗಳು
ರಾಜಕೀಯ ಮಹತ್ವಾಕಾಂಕ್ಷೆ ತನಗಿಲ್ಲ: ಪ್ರಿಯಾಂಕ
ಜಾರ್ಖಂಡ್‌ನಲ್ಲಿ ತೃತೀಯ ರಂಗ
ಅಮೇಥಿಗೆ ಭೇಟಿಯಿತ್ತ ಪ್ರಿಯಾಂಕ
ಚೇತರಿಸಿಕೊಂಡ ಪ್ರಧಾನಿಯ ಪ್ರಥಮ ಅಧಿಕೃತ ಸಭೆ